ಚಿಕ್ಕಮಗಳೂರು: ಕರುವನ್ನು ಹೊತ್ತೊಯ್ದಿದ್ದಕ್ಕೆ ತಾಯಿ ಹಸು ಗೋಕಳ್ಳರ ಕಾರನ್ನು ಅಟ್ಟಿಸಿಕೊಂಡು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸ್ ನಿಲ್ದಾಣದ ಹಿಂಭಾಗ ನಡೆದಿದೆ.
ಗುರುವಾರ ರಾತ್ರಿ ಮೂವರು ಗೋ ಕಳ್ಳರು ಹಸುಗಳ ಕಳ್ಳತನಕ್ಕೆಂದು ಝೈಲೋ ಕಾರಿನಲ್ಲಿ ಕೊಪ್ಪ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಿಡಾಡಿ ಹಸುವನ್ನು ಕಾರಿನೊಳಗೆ ತುಂಬಲು ಯತ್ನಿಸಿದಾಗ ಹಸು ಓಡುವ ವೇಗಕ್ಕೆ ಅದರೊಂದಿಗೆ ಓಡಲಾಗದೆ ಅದನ್ನು ಹಿಡಿಯಲೂ ಆಗದೇ ಕೈಬಿಟ್ಟಿದ್ದಾರೆ.
ಹಸುವಿನ ಕರುವನ್ನು ಕಾರಿನೊಳಗೆ ತುಂಬಿಕೊಂಡು ಹೋಗೋದನ್ನು ಕಂಡ ತಾಯಿ ಹಸು ಕಾರನ್ನು ಅಟ್ಟಿಸಿಕೊಂಡು ಹೋಗಿರುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕರುಗಿಂತ ಮೊದಲೇ ತಾಯಿ ಹಸುವನ್ನು ಹಿಡಿಯಲೆತ್ನಿಸಿದ ಕಳ್ಳರಿಗೆ ಹಸು ಚೆನ್ನಾಗಿ ಪಾಠ ಕಲಿಸಿದೆ. ಎರ್ರಾ ಬಿರ್ರಿ ಓಡಿ ಗೋಕಳ್ಳನನ್ನು ಹೈರಾಣು ಮಾಡಿದೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಳ್ಳರು ಯಾರೆಂದು ತಿಳಿದು ಬಂದಿಲ್ಲ. ಆದರೆ ಕಾರು ಝೈಲೋ ಅನ್ನೋದು ಪತ್ತೆಯಾಗಿದೆ. ಮುಂದೆ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
https://www.youtube.com/watch?v=WRPMx1dEJvs&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv