ಚಿಕ್ಕಬಳ್ಳಾಪುರ: ಬರೋಬ್ಬರಿ ಮೂರು ಲಾರಿ ಲೋಡ್‍ನಷ್ಟು ಜಾನುವಾರುಗಳ ಕೊಂಬು ಹಾಗೂ ಮೂಳೆಗಳನ್ನು ತುಂಬಿದ್ದ ಬೃಹತ್ ಗಾತ್ರದ ಕಂಟೈನರ್ ಲಾರಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್ ಕಡೆಯಿಂದ ಯುಪಿ ನೊಂದಣಿಯ ಬೃಹತ್ ಗಾತ್ರದ ಕಂಟೈನರ್ ಲಾರಿ, ಕ್ಯಾಂಟರ್ ಸೇರಿದಂತೆ ಅಶೋಕ್ ಲೈಲಾಂಡ್‍ನ ಮತ್ತೊಂದು ಗಾಡಿ ಮೂಲಕ ಜಾನುವಾರುಗಳ ಕೊಂಬು, ಮೂಳೆಗಳನ್ನು ಹೊತ್ತು ಮೂರು ವಾಹನಗಳು ಬಾಗೇಪಲ್ಲಿಯಿಂದ ಚಿಕ್ಕ, ಚಿಕ್ಕ ವಾಹನಗಳ ಮೂಲಕ ಅಜ್ಞಾತ ಸ್ಥಳಕ್ಕೆ ರವಾನೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಸಿಪಿಐ ನಾಗರಾಜು ಹಾಗೂ ಎಸ್‍ಐ ಗೋಪಾಲ್ ರೆಡ್ಡಿ ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಾಜು 30 ಟನ್ ಕೊಂಬು ಮೂಳೆಗಳನ್ನು ಜಪ್ತಿ ಮಾಡಿದ್ದಾರೆ.
Advertisement
Advertisement
ಸದ್ಯ ಲಾರಿ ಚಾಲಕರಾದ ಸದಾಖತ್ ಆಲಿ, ತೌಸಿಫ್, ಮಹಮ್ ಬಷೀರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಬಂಧಿತರ ವಿಚಾರಣೆ ನಡೆಸಿರುವ ಪೊಲೀಸರು, ಬಾಗೇಪಲ್ಲಿಯ ಸ್ಥಳೀಯ ವ್ಯಕ್ತಿಯೋರ್ವ ಈ ಗೋವಿನ ಮೂಳೆ ಕೊಂಬುಗಳನ್ನು ಹೈದರಾಬಾದ್ ನಿಂದ ಎಕ್ಸ್‌ಪೋರ್ಟ್ ಮಾಡಿಕೊಂಡು, ಈ ಮೂಳೆ ಕೊಂಬುಗಳನ್ನು ಪುಡಿ ಮಾಡಿ ಬೇರೆ ಕಡೆಗೆ ರವಾನೆ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಆ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಆತನ ಬಂಧನಕ್ಕೂ ಬಲೆ ಬೀಸಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ‘ಡೆಡ್ ಮ್ಯಾನ್ ಆಂಥೆಮ್’ ಔಟ್- ಸ್ಟೈಲಿಶ್ ಲುಕ್‍ನಲ್ಲಿ ಸುದೀಪ್
Advertisement
Advertisement
ಇಷ್ಟೊಂದು ಪ್ರಮಾಣದ ಮೂಳೆ, ಕೊಂಬುಗಳು ಸಿಕ್ಕಿದ್ದು ಎಷ್ಟೊಂದು ಗೋವುಗಳ ಹತ್ಯೆ ಆಗಿರಬೇಕು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ. ಸದ್ಯ ಜಾನುವಾರಗಳ ಹತ್ಯಾ ಪ್ರತಿಬಂಧಕ ಹಾಗೂ ಗೋ ಸಂರಕ್ಷಣ ಕಾಯ್ದೆಯಡಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಅನೈತಿಕ ಸಂಬಂಧ- ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್‍ಸ್ಟೇಬಲ್