– ಮಕ್ಕಳ ಮೇಲೆ ನಿಗಾ ಇಡುವಂತೆ ಎಚ್ಚರಿಕೆ
ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಒಂದೆಡೆ ಕಾಡಾನೆ ಹಾವಳಿಯಿಂದ ಗ್ರಾಮೀಣ ಜನರು ತೋಟಗಳಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಹುಲಿಗಳ (Tigers) ಅಟ್ಟಹಾಸ ಮುಂದುವರೆಯುತ್ತಿದೆ.
ಮಂಗಳವಾರ ರಾತ್ರಿ ಕೂಡ ಪೋನ್ನಂಪೇಟೆ ತಾಲೂಕಿನ ಮಾಯಮುಡಿಯ ಕೊಂಗಂಡ ನಂಜಪ್ಪ ಅವರ ಹಸುವನ್ನು ಹುಲಿ ಕೊಂದು ಹಾಕಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಕೊಂದು ಹುಲಿ ಬಹಳ ದೂರದ ವರೆಗೆ ಎಳೆದೊಯ್ದಿದಿದೆ. ಇದನ್ನೂ ಓದಿ: Lokayukta Raid | ಹುಟ್ಟುಹಬ್ಬದಂದು ಹಾಸ್ಟೆಲ್‌ನಲ್ಲಿ ಹೂಮಳೆ – ಅಂದು ವಾರ್ಡನ್, ಈಗ ಅಧಿಕಾರಿ
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ಹುಲಿ ಕಾಫಿ ತೋಟದ ಒಳಗೆ ಸುಳಿದಾಡುತ್ತಿದ್ದು, ಕಾರ್ಮಿಕರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಯಶ್- ‘ಟಾಕ್ಸಿಕ್’ ಬರ್ತ್‌ಡೇ ಪೀಕ್ ಗ್ಲಿಂಪ್ಸ್ ಔಟ್