ಕಳೆದ ಕೆಲವು ದಿನಗಳಿಂದ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಲ್ಕೈದು ನಾಯಿಮರಿಗಳಿಗೆ ಹಸು ತಾನಾಗಿಯೇ ಹಾಲು ನೀಡುತ್ತಿದೆ. ಸಾಮಾನ್ಯವಾಗಿ ಹಸು ನಿಂತಿದ್ದರೆ, ಅದರ ಕರು ಹಾಲು ಕುಡಿಯವಷ್ಟು ಎತ್ತರವಾಗಿರುತ್ತದೆ. ಇಲ್ಲಿ ಪುಟ್ಟ ನಾಯಿ ಮರಿಗಳಿಗೆ ಕಷ್ಟವಾಗಬಾರದು ಅಂತಾ ಗೋ ಮಾತೆ ಮಲಗಿ ಹಾಲು ನೀಡುತ್ತಿದೆ. ಘಟನೆ ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
Advertisement
Advertisement
ಮನುಷ್ಯರಲ್ಲಿ ನಾನು, ನೀನು ಎಂಬ ಭೇದ ಭಾವವಿರುತ್ತೆ ಹೊರತು ಪ್ರಾಣಿಗಳಲ್ಲಿರಲ್ಲ ಎಂಬುವುದಕ್ಕೆ ತಾಜಾ ಉದಾಹರಣೆ ಇಂದು ನಮ್ಮ ಮುಂದಿದೆ. ಕೆಲ ಪ್ರಾಣಿಗಳು ಪರಸ್ಪರ ಬದ್ಧವೈರಿಗಳಾಗಿದ್ದರು, ಒಂದಕ್ಕೊಂದು ಹಾಲುಣಿಸುವ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ.
Advertisement
ಚೆನ್ನೈನ ಪುದುಕೊಟ್ಟೈ ಗ್ರಾಮದಲ್ಲಿ ಅನಾಥ ಮೇಕೆ ಮರಿಗೆ ಶ್ವಾನವೊಂದು ತಾಯಿಯಾಗಿತ್ತು. ಕನ್ನ ಎಂಬ ಮೇಕೆ ಮರಿ ಕೆಲ ದಿನಗಳ ಹಿಂದೆ ನಡೆದ ಗಜ ಚಂಡಮಾರುತದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿತ್ತು. ತಬ್ಬಲಿ ಮೇಕೆಗೆ ಅದೇ ಮನೆಯಲ್ಲಿದ್ದ ಶ್ವಾನವೇ ತಾಯಿಯಾಗಿ ಆಸರೆಯಾಗಿತ್ತು.
Advertisement
https://www.youtube.com/watch?v=uQca3sM_wfw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv