ಮಡಿಕೇರಿ: ಹುಲಿ ದಾಳಿಗೆ (Tiger Attack) ಬೀಡಾಡಿ ಗಬ್ಬದ ಹಸು ಹಾಗೂ ಹೊಟ್ಟೆಯೊಳಗಿದ್ದ ಕರುವೂ ಬಲಿಯಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajapet) ತಾಲ್ಲೂಕಿನ ಮಾಲ್ದಾರೆ ಸಮೀಪದ ಬಾಣಂಗಾಲದಲ್ಲಿ ನಡೆದಿದೆ.
ಮಾಲ್ದಾರೆ ಗ್ರಾಪಂ ವ್ಯಾಪ್ತಿಯ ಬಾಡಗ ಬಾಣಂಗಾಲದ ಗುಡ್ಡಂಡ ಕಿಟ್ಟು ಎಂಬುವವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಗಬ್ಬದ ಬೀಡಾಡಿ ಹಸು ಹುಲಿ ದಾಳಿಗೆ ಸಾವನಪ್ಪಿದೆ. ಕಾರ್ಮಿಕರು ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದ ಒಳಗೆ ಹಸುವಿನ ಕಳೇಬರ ಕಂಡುಬಂದಿದೆ. ಹಸುವಿನ (Cow) ಮೃತದೇಹದ ಅರ್ಧ ಭಾಗ ಹುಲಿಗೆ ಆಹಾರವಾಗಿದ್ದು, ಹೊಟ್ಟೆಯೊಳಗೆ ಇದ ಕರು ಹೊರಬಂದು ಸತ್ತು ಬಿದ್ದಿದೆ. ಸ್ಥಳಕ್ಕೆ ತಿತಿಮತಿ ವಲಯ ಚೆನ್ನಂಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಮತ್ತು ಆರ್ಆರ್ಟಿ ತಂಡದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Advertisement
Advertisement
ಬಾಡಗ ಬಾಣಂಗಾಲದಲ್ಲಿ ಬೀಡಾಡಿ ಹಸುವಿನ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯುವ ಸಲುವಾಗಿ ವೀರಾಜಪೇಟೆ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಹಾಗೂ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಅವರ ನಿರ್ದೇಶನದ ಮೇರೆಗೆ ಉಪವಲಯ ಅರಣ್ಯಾಧಿಕಾರಿ ಶಶಿ ನೇತೃತ್ವದಲ್ಲಿ ಸ್ಥಳದಲ್ಲಿ ಹುಲಿಯ ಚಲನವಲನಗಳನ್ನು ಕಂಡುಹಿಡಿಯಲು ಕೂಂಬಿಂಗ್ ನಡೆಸಲಾಗುತ್ತಿದೆ. ಹುಲಿಯ ಚಲನವಲನ ಪತ್ತೆಯಾದಲ್ಲಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳದಲ್ಲಿ ಬೋನು ಅಳವಡಿಸಿ ಹುಲಿ ಸೆರೆಗೆ ಮುಂದಾಗುವುದಾಗಿ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
Advertisement
Advertisement
ಮುಂದುವರಿದ ವ್ಯಾಘ್ರನ ಅಟ್ಟಹಾಸ:
ಕಳೆದ ಎರಡು ದಿನಗಳ ಹಿಂದೆ ಶ್ರೀಮಂಗಲದಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಮಾಲ್ದಾರೆ ಗ್ರಾಪಂ ವ್ಯಾಪ್ತಿಯಲ್ಲಿ ಹುಲಿ ದಾಳಿ ನಡೆದಿರುವುದು ಸಾರ್ವಜನಿಕರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಾಡಾನೆ ಹಾವಳಿಯಿಂದ ತತ್ತರಿಸಿರುವ ಮಾಲ್ದಾರೆ ವ್ಯಾಪ್ತಿಯ ಕೃಷಿಕರು ಹಾಗೂ ಕಾರ್ಮಿಕರು ಇದೀಗ ಹುಲಿಯ ದಾಳಿಗೆ ಹೆದರಿ ಕೆಲಸಕ್ಕೆ ತೆರಳದೇ ಇರುವುದು ಕಂಡುಬರುತ್ತಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ಬಿಗ್ ರಿಲೀಫ್ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ
ಕಳೆದ ಎರಡು ವರ್ಷಗಳ ಹಿಂದೆಯೂ ಹುಲಿ ದಾಳಿಗೆ ಜನ ತತ್ತರಿಸಿದ್ದರು. ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿಗಳು ಮನುಷ್ಯರನ್ನು ಕೊಂದಿದ್ದವು. ಆ ಬಳಿಕ ಹರಸಾಹಸ ಪಟ್ಟು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಮತ್ತೆ ಬೆದರಿಕೆ – ಬಿಷ್ಣೋಯ್ ಜೊತೆಗಿನ ದ್ವೇಷ ಕೊನೆಗೊಳಿಸಲು 5 ಕೋಟಿಗೆ ಬೇಡಿಕೆ