ಉಡುಪಿ: ರಾಷ್ಟ್ರಗೀತೆ, ನಾಡಗೀತೆಗೆ ಗೌರವ ಕೊಡಬೇಕು ಎಂಬುದು ನಿಯಮ. ಬುದ್ಧಿ ತಿಳಿದ ಮನುಷ್ಯರೇ ಕೆಲವೊಮ್ಮೆ ನಿಯಮ ಉಲ್ಲಂಘನೆ ಮಾಡಿ ಉಡಾಫೆ ತೋರಿಸುತ್ತಾರೆ. ಆದರೆ ನಿಯಮ ಗೊತ್ತಿಲ್ಲದ ಹಸುವೊಂದು ನಾಡಗೀತೆ ಕೇಳಿದ ತಕ್ಷಣ ಕೊಂಚವೂ ಅಲುಗಾಡದೆ ನಿಂತು ಗೌರವ ತೋರಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬೈಂದೂರು ವಲಯದ ಮಾವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಶಾಲಾ ವಿದ್ಯಾರ್ಥಿಗಳು ಮುಂಜಾನೆ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಹಸು ಶಾಲಾ ಆವರಣದೊಳಗೆ ಬಂದಿದೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡುವಾಗ ಶಿಸ್ತಿನಲ್ಲಿ ಹಸು ಒಂದೇ ಕಡೆ ನಿಂತಿದೆ. ಇದನ್ನೂ ಓದಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ
ಅದರಲ್ಲಿಯೂ ಈ ಹಸುವಿನ ವಿಶೇಷವೆಂದರೆ ನಾಡಗೀತೆ ಮುಗಿಯುವವರೆಗೂ ಕದಲದೆ ನಿಂತಲ್ಲೆ ನಿಂತಿದ್ದು, ನಂತರ ಹುಲ್ಲು ಅರಸುತ್ತಾ ಹೋಗಿದೆ. ನಾಡಗೀತೆಗೆ ಹಸು ಪ್ರತಿಕ್ರಿಯಿಸಿದ ಈ ವಿಶೇಷ ದೃಶ್ಯವನ್ನು ಶಿಕ್ಷಕರೊಬ್ಬರು ಸೆರೆ ಹಿಡಿದಿದ್ದಾರೆ.