ಕಲಬುರಗಿ: ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಹುಟ್ಟಿದರೆ ತೊಟ್ಟಿಲು ನಾಮಕಾರಣ ಮಾಡಿ ಸಂಭ್ರಮಿಸುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಕಲಬುರಗಿಯಲ್ಲಿ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರು ತಾವು ಸಾಕಿದ ಕರುವಿಗೆ ನಾಮಕರಣ ಮಾಡುವ ಮೂಲಕ ಗೋ ಪ್ರೇಮ ಮೆರೆದಿದ್ದಾರೆ.
Advertisement
ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಎಸ್ಐ ಯಶೋಧಾ ಕಟಕೆ ಅವರು ಸಾಕಿರುವ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದೆ. ತಮ್ಮ ಮನೆಯ ಮಗುವಿನಂತೆ ಕರುವಿಗೆ ರಾಧಾ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಸಾಧ್ಯತೆ
Advertisement
ಪೊಲೀಸ್ ಇಲಾಖೆಯ ವೃತ್ತಿ ಜೊತೆ ಪ್ರಾಣಿ-ಪಕ್ಷಿಗಳ ಪಾಲನೆ ಮಾಡುವುದು ಯಶೋಧಾ ಅವರಿಗೆ ಮೊದಲಿನಿಂದಲೂ ಇರುವ ಹವ್ಯಾಸ. ಹೀಗಾಗಿ ಒಂದು ಮಗುವಿಗೆ ಸಿಗುವ ಪ್ರೀತಿ ಈ ಕರುವಿಗೂ ಸಿಗಲಿ ಎಂದು ತೊಟ್ಪಿಲು ಶಾಸ್ತ್ರ ಮಾಡಿ ರಾಧಾ ಅಂತ ಹೆಸರಿಟ್ಟು ಪ್ರಾಣಿಗಳ ಮೇಲಿರುವ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.
Advertisement
Advertisement
ಯಶೋಧಾ ಅವರು ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಜನಸ್ನೇಹಿ ಪೊಲೀಸ್ ಎಂದು ಹೆಸರು ಮಾಡಿದ್ದಾರೆ. ಕೊರೊನಾ ಕಾಲದ ವೇಳೆ ಸ್ವಂತ ಖರ್ಚಿನಲ್ಲಿ ಬಡವರಿಗೆ ಸಹಾಯ ಮಾಡಿದ್ದಾರೆ. ಇದೀಗ ತೊಟ್ಟಿಲು ಕಾರ್ಯಕ್ರಮದಲ್ಲಿ ಮಂಗಳಮುಖಿಯರನ್ನು ಕರೆಸಿ ಅರಿಶಿಣ, ಕುಂಕುಮ ಕೊಟ್ಟು ಗೌರವಿಸಿದ್ದಾರೆ. ತೊಟ್ಟಿಲು ಶಾಸ್ತ್ರದಲ್ಲಿ ಮಂಗಳಮುಖಯರಿಂದಲೇ ಕರುವಿಗೆ ಹೆಸರಿಡಿಸಿದ್ದಾರೆ. ಇದನ್ನೂ ಓದಿ: ಬಲವಂತದ ಮತಾಂತರ ಜಾಮೀನುರಹಿತ ಅಪರಾಧ