ನವದೆಹಲಿ: 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಭಾರತದ ಸೇರಂ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿರುವ ಕೋವಿಡ್ ಲಸಿಕೆ ಕೋವೊವ್ಯಾಕ್ಸ್ ನೀಡಲು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (NTAGI) ಅನುಮೋದನೆ ನೀಡಿದೆ ಎಂದು ಮೂಲಗಳಿಂದ ವರದಿಯಾಗಿದೆ.
Advertisement
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತಜ್ಞರು ಸೇರಂ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿರುವ ಕೋವೊವ್ಯಾಕ್ಸ್ ಲಸಿಕೆಯನ್ನು ತುರ್ತು ಬಳಕೆಗೆ ಈ ಮೊದಲೇ ಅನುಮತಿ ನೀಡಿದ್ದರು. ಇದೀಗ ಎಲ್ಲಾ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ನೀಡಿರುವ ಬಗ್ಗೆ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಕೋವಿಡ್ ಉಲ್ಬಣ – ಐಐಟಿಯಲ್ಲೂ ಹೆಚ್ಚಿದ ಸೋಂಕು
Advertisement
Advertisement
ಕೋವೊವ್ಯಾಕ್ಸ್ ಲಸಿಕೆ 12 ವರ್ಷದಿಂದ ಮೇಲ್ಪಟ್ಟ ಮಕ್ಕಳಿಗೆ ನೀಡುವ ಕುರಿತಾಗಿ ಕೇಂದ್ರ ಆರೋಗ್ಯ ಇಲಾಖೆ ಚಿಂತನೆ ನಡೆಸಿತ್ತು. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ 900 ರೂ. ಒಂದು ಡೋಸ್ ಲಸಿಕೆಗೆ ದರ ನಿಗದಿ ಪಡಿಸಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ದರ ನಿಗದಿಯಾಗಿಲ್ಲ. ಇದನ್ನೂ ಓದಿ: 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ
Advertisement
NTAGI approves SII's Covovax COVID vaccine for 12-17 age group: Sources
Read @ANI Story |https://t.co/m3q9zGbxGt#COVID19 #Covovax #vaccine #vaccination pic.twitter.com/4aNr0iVILj
— ANI Digital (@ani_digital) April 29, 2022
ಈ ಹಿಂದೆ ನೋವೊವ್ಯಾಕ್ಸ್ ಲಸಿಕೆ ಮಕ್ಕಳಿಗೆ 80% ಪರಿಣಾಮಕಾರಿ ಎಂದು ವರದಿಯಾಗಿತ್ತು. ಇದೀಗ ಕೊನೆಯ ಹಂತದ ಟೆಸ್ಟ್ ನಡೆಯುತ್ತಿದೆ. ಈ ಮಧ್ಯೆ ಇದೀಗ ಕೋವೊವ್ಯಾಕ್ಸ್ ಲಸಿಕೆಗೆ ಅನುಮತಿ ದೊರೆತಿದೆ.