ವಾಷಿಂಗ್ಟನ್: ಅಮೆರಿಕ ಪ್ರವಾಸಕ್ಕೆ ಹೋಗಲು ಪ್ಲಾನ್ ಹೊಂದಿರುವವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕೊರೊನಾ ಸಾಂಕ್ರಮಿಕ ರೋಗದಿಂದಾಗಿ ಹೇರಲಾಗಿದ್ದ ನಿಬರ್ಂಧವನ್ನು ಇದೀಗ ದೇಶವು ಸಡಿಲಗೊಳಿಸಲಾಗಿದ್ದು, ಕೋವಿಶೀಲ್ಡ್ ಲಸಿಕೆ ಪಡೆದವರ ಪ್ರವೇಶಕ್ಕೆ ಅಮೆರಿಕಾ ಅನುಮತಿ ನೀಡಿದೆ.
Advertisement
ಭಾರತ ಸೇರಿಂದತೆ 33 ದೇಶಗಳ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರು ನವೆಂಬರ್‍ನಿಂದ ಅಮೆರಿಕಕ್ಕೆ ಪ್ರಯಾಣ ಮಾಡಬಹುದೆಂದು ಶ್ವೇತಭವನ ಆದೇಶ ಹೊರಡಿಸಿದೆ. ಇದನ್ನೂ ಓದಿ: ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ
Advertisement
Advertisement
33 ದೇಶಗಳ ಪಟ್ಟಿಯಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಗ್ರೀಸ್, ಚೀನಾ, ಬ್ರೆಜಿಲ್ ಸಹ ಇವೆ. ಆದರೆ ಅಮೆರಿಕದ ಎಫ್‍ಡಿಎ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಅಮೆರಿಕಾ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಭಾರತದ ಕೋವಿಶೀಲ್ಡ್ ಪಡೆದವರಿಗೆ ಮಾತ್ರ ಅನುಮತಿ ಸಿಕ್ಕಂತಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮನ್ನಣೆ ಇಲ್ಲದ ಕಾರಣ ಕೋವ್ಯಾಕ್ಸಿನ್‍ಗೆ ಈ ಭಾಗ್ಯವಿಲ್ಲ. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!
Advertisement
ಈ ಹಿಂದೆ ಅಮೆರಿಕಗೆ ಆಗಮಿಸುವ ಪ್ರಯಾಣಿಕರ ಮೇಲೆ ಕೋವಿಡ್-19 ಹರಡುವಿಕೆಯನ್ನು ತಡೆಯಲು ಕೆಲವು ಕಠಿಣ ನಿಬರ್ಂಧಗಳನ್ನು ಹೇರಲಾಗುತ್ತಿದೆ. ಇದು ಅಮೇರಿಕರನ್ನು ರಕ್ಷಿಸುವುದರ ಜೊತೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಸುರಕ್ಷಿವಾಗಿರಿಸುತ್ತದೆ. ನವೆಂಬರ್ ನಿಂದ ಅಮೇರಿಕಾಕ್ಕೆ ಪ್ರಯಾಣಿಸುವವರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಕಡ್ಡಾಯವಾಗಿದೆ. ಯುಎಸ್‍ಗೆ ಹೋಗುವ ವಿಮಾನ ಹತ್ತುವ ಮುನ್ನ ಕೋವಿಡ್-19 ಲಸಿಕೆ ಪಡೆದಿದಕ್ಕೆ ಪುರಾವೆಗಳನ್ನು ತೋರಿಸಬೇಕಾಗುತ್ತದೆ ಎಂದು ಅಮೆರಿಕ ಹೇಳಿತ್ತು.