– ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 191ಕ್ಕೆ ಏರಿಕೆ
– ಬಾಗಲಕೋಟೆಯಲ್ಲಿ ಮತ್ತೆ ಮೂವರಿಗೆ ಕೊರೊನಾ
ಬೆಂಗಳೂರು: ಇವತ್ತು 10 ಮಂದಿಗೆ ಪಾಸಿಟಿವ್ ಬಂದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ.
Advertisement
ಇಬ್ಬರು ಮಕ್ಕಳು ಸೇರಿದಂತೆ ರೋಗಿಯ ಜೊತೆ ಪ್ರಯಾಣಿಸಿದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬಾಗಲಕೋಟೆಯಲ್ಲಿ ಮೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಎರಡು, ಬೆಳಗಾವಿ, ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆಯ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.
Advertisement
Advertisement
ಕೊರೊನಾ ಪೀಡಿತ 191 ಮಂದಿ ಪೈಕಿ ಒಟ್ಟು 6 ಮಂದಿ ಮೃತಪಟ್ಟಿದ್ದು 28 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ರೋಗಿಗಳ ವಿವರ:
ರೋಗಿ 182 – 50 ವರ್ಷದ ವ್ಯಕ್ತಿಗೆ ತಂದೆಯಿಂದ(ರೋಗಿ 128) ಕೊರೊನಾ ಬಂದಿದ್ದು, ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 183 – 55 ವರ್ಷದ ವ್ಯಕ್ತಿ ರೋಗಿ 104 ಮತ್ತು 159ನೇ ರೋಗಿಯ ಸಂಪರ್ಕಕ್ಕೆ ಬಂದಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 184 – 68 ವರ್ಷ ವ್ಯಕ್ತಿಗೆ ಮಗನಿಂದ(ರೋಗಿ 159) ಕೊರೊನಾ ಬಂದಿದ್ದು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 185 – 68 ವರ್ಷದ ವ್ಯಕ್ತಿ ಫಾರ್ಮ ಕಂಪನಿಯ ರೋಗಿ 78ರ ಸಹ ಪ್ರಯಾಣಿಕನಾಗಿದ್ದು ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 186 – 4 ವರ್ಷದ ಗಂಡು ಮಗು ತಂದೆಯಿಂದ(ರೋಗಿ 165) ಸೋಂಕು ತಗುಲಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 187 – 13 ವರ್ಷದ ಬಾಲಕನಿಗೆ ಮಾವನಿಂದ(ರೋಗಿ 165) ಕೊರೊನಾ ಬಂದಿದ್ದು, ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 188 – 9 ವರ್ಷದ ಹೆಣ್ಣು ಮಗುವಿಗೆ ಸೋದರ ಮಾವನಿಂದ(ರೋಗಿ 165) ಬಂದಿದ್ದು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 189 – 19 ವರ್ಷದ ಯುವತಿ ದೆಹಲಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 190 – 27 ವರ್ಷದ ವ್ಯಕ್ತಿ ದೆಹಲಿ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 191 – 48 ವರ್ಷದ ಮಹಿಳೆಗೆ ಸಹೋದರನಿಂದ(ರೋಗಿ 94) ಮತ್ತು ರೋಗಿ 19ರ ಸಂಪರ್ಕಕ್ಕೆ ಬಂದಿದ್ದರಿಂದ ಬಂದಿದೆ. ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.