ನವದೆಹಲಿ: ವಿಮಾನದಲ್ಲಿ ಕೊರೊನಾ ವೈರಸ್ ಸೋಂಕು ಶಂಕಿತ ಪ್ರಯಾಣಿಸುತ್ತಿರುವ ವಿಷಯ ತಿಳಿದ ಪೈಲಟ್ ಕಿಟಕಿಯಿಂದ ಜಿಗಿದಿದ್ದಾರೆ.
ಮಾರ್ಚ್ 20ರಂದು ಈ ಘಟನೆ ನಡೆದಿದೆ. ವಿಮಾನದಲ್ಲಿ ಕೊರೊನಾ ಶಂಕಿತ ವಿಷಯ ತಿಳಿಯುತ್ತಿದ್ದಂತೆ ಎಲ್ಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಗಲಾಟೆ ಆರಂಭಿಸಿದ್ದಾರೆ. ಪೈಲಟ್ ಕುಳಿತುಕೊಳ್ಳುವ ಕಾಕ್‍ಪಿಟ್ ನಲ್ಲಿ ಸ್ಲೈಡಿಂಗ್ ಕಿಟಕಿ ಇರುತ್ತದೆ.
Advertisement
ಮಾರ್ಚ್ 20ರಂದು ಏರ್ ಏಶಿಯಾ ಇಂಡಿಯಾ ಪ್ಲೇನ್ I5-732 ಪುಣೆಯಿಂದ ದೆಹಲಿಗೆ ಟೇಕಾಫ್ ಆಗಿತ್ತು. ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಕೊರೊನಾ ಶಂಕಿತ ಪ್ರಯಾಣಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ದೂರದಲ್ಲಿ ಲ್ಯಾಂಡ್ ಮಾಡಿಸಲಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರು ಭಯಗೊಂಡಿದ್ದರು.
Advertisement
ವಿಮಾನ ಸಿಬ್ಬಂದಿ ಪ್ರಯಾಣಿಕರೆಲ್ಲರನ್ನು ಹಿಂದಿನ ದ್ವಾರದ ಮೂಲಕ ಕೆಳಗಿಳಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. ಎಲ್ಲರದ್ದು ನೆಗಟಿವ್ ವರದಿ ಬಂದಿದೆ ಎಂದು ಏರ್ ಏಶಿಯಾ ಇಂಡಿಯಾ ಪ್ರವರ್ತಕರು ಮಾಹಿತಿ ನೀಡಿದ್ದಾರೆ.
Advertisement
ಪ್ರಯಾಣಿಕರು ಹೊರ ಬಂದ ಕೂಡಲೇ ವಿಮಾನವನ್ನು ಶುಚಿಗೊಳಿಸಿ ಸ್ಯಾನಿಟೈಸರ್ ಮಾಡಲಾಗಿದೆ. ಈ ರೀತಿಯ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ಈ ಬಗ್ಗೆ ಅವರಿಗೆ ತರಬೇತಿಯನ್ನು ಸಹ ನೀಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ಕಾರ್ಯನಿರ್ವಹಿಸಿದ ಸಿಬ್ಬಂದಿ ಧನ್ಯವಾದಗಳು ಎಂದು ಏಶಿಯಾ ಇಂಡಿಯಾ ಪ್ರವರ್ತಕ ಹೇಳಿದ್ದಾರೆ.