ನವದೆಹಲಿ: ಕೋವಿಡ್-19 ಲಸಿಕೆಗಳನ್ನು ಕಡ್ಡಾಯಗೊಳಿಸಿಲ್ಲ. ಆದರೆ ಶೇ.100 ರಷ್ಟು ಲಸಿಕೆ ನೀಡಬೇಕೆಂದು ಹೇಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಶೇ.100 ರಷ್ಟು ಜನರು ಕೋವಿಡ್ ಲಸಿಕೆಯನ್ನು ಪಡೆಯಲೇಬೇಕು ಎಂದು ಕೇಂದ್ರ ಸರ್ಕಾರವು ಆದೇಶ ನೀಡಿದೆ ಎಂದು ತಮಿಳುನಾಡು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮಿತ್ ಆನಂದ್ ತಿವಾರಿ, ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠಕ್ಕೆ ತಿಳಿಸಿದ್ದರು. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು – ದೆಹಲಿಯ ಏಮ್ಸ್‌ಗೆ ಶಿಫ್ಟ್
ಕೋವಿಡ್ ಲಸಿಕೆಯನ್ನು ಶೇ.100ರಷ್ಟು ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿರುವುದರಿಂದ ಕಡ್ಡಾಯಗೊಳಿಸಿದ್ದೇವೆ ಎಂದು ತಮಿಳುನಾಡು ತಿಳಿಸಿದೆ. ಶೇ.100ರಷ್ಟು ಲಸಿಕೀಕರಣ ಆಗಬೇಕು ಎಂಬ ನಿಲುವನ್ನು ಕೇಂದ್ರ ವ್ಯಕ್ತಪಡಿಸಿದೆ. ಆದರೆ ಇದು ಆದೇಶವಲ್ಲ ಎಂದು ಮೆಹ್ತಾ ತಿಳಿಸಿದ್ದಾರೆ.
ಜನಸಂಖ್ಯೆಯಲ್ಲಿ ಗಂಭೀರ ರೋಗವನ್ನು ತಡೆಗಟ್ಟಲು ಕೋವಿಡ್ ವಿರುದ್ಧ ವ್ಯಾಕ್ಸಿನೇಷನ್ ಅತ್ಯಗತ್ಯ ಎಂಬ ಕಾರಣಕ್ಕಾಗಿ ತಮಿಳುನಾಡು ಲಸಿಕೆ ಆದೇಶವನ್ನು ಹೊರತಂದಿದೆ ಎಂದು ಸುಪ್ರೀಂಗೆ ತಿವಾರಿ ವರದಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಕಿರುಕುಳ ಎದುರಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ನಾನು ತಜ್ಞರ ವರದಿಗಳನ್ನು ಸಲ್ಲಿಸಿದ್ದೇನೆ. ಲಸಿಕೆ ಪಡೆಯದ ಜನರು ವೈರಸ್‌ಗಳ ರೂಪಾಂತರಕ್ಕೆ ಕಾರಣರಾಗಿದ್ದಾರೆ. ಇತರರಿಗೆ ಸೋಂಕು ತಗುಲುವ ಅಥವಾ ಹರಡುವ ಸಾಧ್ಯತೆಯಿದ್ದರೆ ಅಂತಹ ಆದೇಶಗಳನ್ನು ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ. ಲಸಿಕೆಗಳು ಗಂಭೀರ ರೋಗವನ್ನು ತಡೆಗಟ್ಟುತ್ತವೆ ಎಂದು ತೋರಿಸಲು ಸಾಕಷ್ಟು ಪುರಾವೆಗಳಿವೆ ಎಂದು ತಿವಾರಿ ತಿಳಿಸಿದ್ದಾರೆ.
ರೋಗ ಹರಡುವುದನ್ನು ತಡೆಯಲು ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿಬಂಧನೆಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಬ್ಬರ ಸುರಕ್ಷತೆಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ಮುಂದೆ 60 ಕಿ.ಮೀ. ವ್ಯಾಪ್ತಿಯೊಳಗೆ ಟೋಲ್ ತೆರಿಗೆ ಇರಲ್ಲ: ನಿತಿನ್ ಗಡ್ಕರಿ
ಕೋವಿಡ್ ಲಸಿಕೆಗಳ ವೈದ್ಯಕೀಯ ಪ್ರಯೋಗಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗ ಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ, ಐಸಿಎಂಆರ್, ಭಾರತ್ ಬಯೊಟೆಕ್ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೋಟಿಸ್ ನೀಡಿತ್ತು.