ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕಣಗಳು ಮತ್ತೆ ಹೆಚ್ಚುತ್ತಿರುವ ಹೊತ್ತಲ್ಲೆ ವ್ಯಾಕ್ಸಿನ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ತಯಾರಿ ಆರಂಭಗೊಂಡಿದೆ. 12-14 ವರ್ಷದ ಮಕ್ಕಳಿಗೆ ನಡೆಯುತ್ತಿರುವ ವ್ಯಾಕ್ಸಿನೇಷನ್ ಅಭಿಯಾನ ಯಶಸ್ಸು ಕಂಡ ಬಳಿಕ ಈಗ 5-12 ವರೆಗಿನ ಮಕ್ಕಳಿಗೆ ವ್ಯಾಕ್ಸಿನ್ ಅಭಿಯಾನ ವಿಸ್ತರಿಸುವ ಚಿಂತನೆ ಶುರುವಾಗಿದೆ.
Advertisement
ಈ ಸಂಬಂಧ ಚರ್ಚಿಸಲು ಡಿಸಿಜಿಐನ ವಿಷಯ ತಜ್ಞರ ತಂಡ ಇಂದು ವಿಶೇಷ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ 5-12 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಕಾರ್ಬೆವಾಕ್ಸ್ ವ್ಯಾಕ್ಸಿನ್ ಮಕ್ಕಳಿಗೆ ನೀಡಲು ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ: ರೇಣುಕಾಚಾರ್ಯ ವ್ಯಂಗ್ಯ
Advertisement
Advertisement
ಜನವರಿ 3 ರಿಂದ ಭಾರತದಲ್ಲಿ ಅಪ್ರಾಪ್ತ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಮೊದಲು 15-18 ಬಳಿಕ 12-15 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಯಿತು. ಈಗ 5-12 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ವ್ಯಾಕ್ಸಿನ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹಣದುಬ್ಬರದ ಬಗ್ಗೆ ಅರ್ಥಹೀನ ಮಾತನಾಡಿದ್ದಾರೆ: ದಿನೇಶ್ ಗುಂಡೂರಾವ್
Advertisement
ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಕೋವಿಡ್ -19 ಸೋಂಕುಗಳು ಹೆಚ್ಚಾದ ಬಳಿಕ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಹಲವಾರು ರಾಜ್ಯಗಳು ಮತ್ತು ಮಹಾನಗರಗಳಲ್ಲಿ ಮತ್ತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ.