– ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ಆರೋಪ
– ಆಗಿನ ಸಿಎಂ, ಆರೋಗ್ಯ ಸಚಿವರಿಗೆ ಬಿಸಿ ತಟ್ಟುತ್ತಾ?
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣ (Covid Scam) ಆರೋಪ ಪ್ರಕರಣದ ತನಿಖಾ ವರದಿಯನ್ನು ಜಸ್ಟೀಸ್ ಜಾನ್ ಮೈಕಲ್ ಡಿ. ಕುನ್ಹಾ (John Michael DCunha) ನೇತೃತ್ವದ ಆಯೋಗ ಶನಿವಾರ ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
Advertisement
ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ಕೋವಿಡ್ ವೇಳೆ ಭಾರೀ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಆರೋಪಿಸಿತ್ತು. ವೆಂಟಿಲೇಟರ್‌ಗಳ ಖರೀದಿ, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್-19 ನಿರ್ವಹಣಾ ಉಪಕರಣಗಳು, ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖರೀದಿ ಮತ್ತು ಸಂಗ್ರಹಣೆಯಲ್ಲಿ ಲೋಪ ಮತ್ತು ಅಕ್ರಮ ನಡೆದಿದೆ ಎಂದೂ ಸಹ ಆರೋಪಿಸಿತ್ತು. ಇದನ್ನೂ ಓದಿ: ಯುಜಿ ನೀಟ್ & ಯುಜಿ ಸಿಇಟಿ-24 | ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಆ.31 ರಿಂದ ʻಚಾಯ್ಸ್ʼ ಆಯ್ಕೆ!
Advertisement
ಈ ಸಂಬಂಧ ತನಿಖೆ ನಡೆಸಲು 2023ರ ಆಗಸ್ಟ್‌ನಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಡಿ. ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು. ಮೂರು ತಿಂಗಳಲ್ಲಿ ವರದಿ ಸಲ್ಲಿಕೆ ಮಾಡುವಂತೆ ಸರ್ಕಾರ ಸೂಚಿಸಿತ್ತು. ಕೆಲ ದಿನಗಳ ನಂತರದಲ್ಲಿ ವರದಿ ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡಿತ್ತು. ಸದ್ಯ ತನಿಖೆ ಪೂರ್ಣಗೊಂಡಿದ್ದು, ಕುನ್ಹಾ ನೇತೃತ್ವದ ಆಯೋಗ ವರದಿ ಸಲ್ಲಿಸಲು ಮುಂದಾಗಿದೆ. ಶನಿವಾರ (ಆ.31ರಂದು) ಸಿಎಂ ಸಿದ್ದರಾಮಯ್ಯ ಅವರು ವರದಿ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement
ಆರೋಗ್ಯ ಇಲಾಖೆಯಿಂದಲೂ ವರದಿ ಸಲ್ಲಿಕೆ:
ಕೋವಿಡ್ ಹಗರಣಗಳ ಬಗ್ಗೆ ತನಿಖೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಹಣಕಾಸು ವಿಭಾಗವು ರಾಜ್ಯ ಸರ್ಕಾರಕ್ಕೆ 2023ರ ಜುಲೈ 5ರಂದೇ ವರದಿ ಸಲ್ಲಿಸಿತ್ತು. ಇದನ್ನೂ ಓದಿ: ಇಂದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರದವರೆಗೂ ಮೆಟ್ರೋ ಸೇವೆ ಸ್ಥಗಿತ
ಬಿಜೆಪಿ ಅವಧಿಯಲ್ಲಿ ಕೋವಿಡ್ (COVID 19) ವೇಳೆ ಎಷ್ಟು ವೈದ್ಯಕೀಯ ಸಲಕರಣೆ ಖರೀದಿ ಆಗಿತ್ತು, ಯಾವೆಲ್ಲ ಔಷಧಿ ಖರೀದಿ ಮಾಡಿದ್ರು? ವಿಭಾಗವಾರು ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ? ಏನೆಲ್ಲಾ ಖರೀದಿ ಆಗಿದೆ? ಎನ್.ಹೆಚ್.ಎಂ, ಅಡ್ಮಿನ್ ವಿಭಾಗ, ಇಂಜಿನಿಯರಿಂಗ್ ವಿಭಾಗ, ಐಸಿಯು, ವೆಂಟಿಲೇಟರ್ ಖರೀದಿ ಸೇರಿದಂತೆ ವಿಭಾಗವಾರು ಪ್ರತ್ಯೇಕ ಪ್ರತ್ಯೇಕ ಬಿಲ್ ಗಳನ್ನ ಒಳಗೊಂಡ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು.
ಇದೀಗ ಆಯೋಗದ ತನಿಖಾ ವರದಿ ಬಳಿಕ ಅಂದಿನ ಸಿಎಂ, ಆರೋಗ್ಯ ಸಚಿವರಿಗೆ ಬಿಸಿ ತಟ್ಟುತ್ತಾ? ಅನ್ನೋ ಪ್ರಶ್ನೆಯೂ ಎದ್ದಿದೆ. ಸರ್ಕಾರದ ಮುಂದಿನ ಕ್ರಮದ ಬಗ್ಗೆ ಕಾದುನೋಡಬೇಕಿದೆ. ಇದನ್ನೂ ಓದಿ: ಕೋರ್ಟ್‍ಗೆ ಹಾಜರಾಗದೇ ಕಳ್ಳಾಟ – ಗೋವಾದಲ್ಲಿ ಲಾಯರ್ ಜಗದೀಶ್ ಅರೆಸ್ಟ್