InternationalLatestMain Post

ಕೋವಿಡ್ ಏರಿಕೆ – ಚೀನಾದಲ್ಲಿ ಮತ್ತೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ

ಬೀಜಿಂಗ್: ಚೀನಾದ (China) ಜನತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರ ಕಟ್ಟುನಿಟ್ಟಿನ ಲಾಕ್‌ಡೌನ್ (Lockdown) ನಿರ್ಧಾರದಿಂದ ಬೇಸತ್ತು ಅಲ್ಲಲ್ಲಿ ಪ್ರತಿಭಟಿಸಿದ್ದಾಗಿ ಈ ಹಿಂದೆ ವರದಿಯಾಗಿತ್ತು. ಜಿನ್ ಪಿಂಗ್ 3ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕವಾದರೂ ಕೋವಿಡ್‌ನ (Covid) ಮಾನದಂಡಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ಊಹಿಸಲಾಗಿತ್ತು. ಆದರೆ ಬದಲಾಗಿ ಚೀನಾದಾದ್ಯಂತ ಮತ್ತೆ ಕಟ್ಟುನಿಟ್ಟಿನ ಲಾಕ್‌ಡೌನ್ ಅನ್ನು ವಿಧಿಸಿರುವುದಾಗಿ ವರದಿಯಾಗಿದೆ.

ಶಾಂಘೈನ (Shanghai) ಯಾಂಗ್‌ಪು ಜಿಲ್ಲೆಯಲ್ಲಿ ಶುಕ್ರವಾರ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಲಾಗಿದೆ. ಕೋವಿಡ್‌ನ ಮೂಲ ಕೇಂದ್ರಬಿಂದುವಾಗಿರುವ ವುಹಾನ್‌ನಿಂದ (Wuhan) ಪೂರ್ವ ಕರಾವಳಿಯಲ್ಲಿರುವ ಚೀನಾದ ಕೈಗಾರಿಕಾ ವಲಯದವರೆಗೂ ಹೊಸದಾಗಿ ಲಾಕ್‌ಡೌನ್‌ಅನ್ನು ವಿಧಿಸಲಾಗಿದೆ. ಗುವಾಂಗ್‌ಝೌದಲ್ಲಿನ ರೆಸ್ಟೋರೆಂಟ್‌ಗಳನ್ನು, ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೋವಿಡ್ ಸೋಕಿತ ವ್ಯಕ್ತಿಗಳು ಯಾರಾದರೂ ಕಂಡುಬಂದಲ್ಲಿ ನೆರೆಹೊರೆಯವರು ಕೂಡಾ ಮನೆಯಿಂದ ಹೊರಗೆ ಬರದಂತೆ ಆದೇಶಿಸಲಾಗಿದೆ. ಇದನ್ನೂ ಓದಿ: ಜುಟ್ಟು ಹಿಡಿದು ರೋಗಿಯನ್ನು ಬೆಡ್ ಮೇಲೆ ಎಳೆದೊಯ್ದ ನರ್ಸ್ – ನಡೆದಿದ್ದೇನು ಗೊತ್ತಾ?

china-coronavirus covid

ಚೀನಾದಾದ್ಯಂತ ಮತ್ತೆ ಕೋವಿಡ್ ಪ್ರಕರಣಗಳ ಏರಿಕೆ ಕಂಡುಬರುತ್ತಿರುವ ಹಿನ್ನೆಲೆ ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚೀನಾದಲ್ಲಿ ಗುರುವಾರ 1,321 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದು ಕಳೆದ 2 ವಾರಗಳಲ್ಲಿ ದಾಖಲೆಯಾದ ಅತಿ ಹೆಚ್ಚಿನ ಪ್ರಕರಣಗಳಾಗಿವೆ. ಇದನ್ನೂ ಓದಿ: ಸೆಮಿಫೈನಲ್ ನಂತರ ಭಾರತ ಕೂಡ ಮನೆಗೆ – ಶೋಯೆಬ್ ಅಖ್ತರ್

Live Tv

Leave a Reply

Your email address will not be published. Required fields are marked *

Back to top button