ಮುಂಬೈ: ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ದದ್ಲಾನಿ ಅವರ ತಂದೆ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.
ಸದ್ಯ ತಂದೆಯ ಅಗಲಿಕೆಯ ನೋವಿನಲ್ಲಿರುವ ವಿಶಾಲ್ ದದ್ಲಾನಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಂದೆಯ ನಿಧನದ ಬಳಿಕ ಜೀವನವನ್ನು ಹೇಗೆ ನಡೆಸಬೇಕು ಎಂದು ತಿಳಿಯುತ್ತಿಲ್ಲ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
Advertisement
Advertisement
ಇತ್ತೀಚೆಗಷ್ಟೇ ವಿಶಾಲ್ ದದ್ಲಾನಿ ಅವರು ತಮಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದರು. ಇದೋಗ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಸಂಕಷ್ಟದ ಸಮಯದಲ್ಲಿ ಕೊರೊನಾ ಕಾರಣದಿಂದ ತಮ್ಮ ತಾಯಿಯೊಂದಿಗೆ ಇರಲು ಸಹ ಸಾಧ್ಯವಾಗಲಿಲ್ಲ. ನನ್ನ ಬೆಸ್ಟ್ ಫ್ರೆಂಡ್, ಅತ್ಯುತ್ತಮ ವ್ಯಕ್ತಿ ಮತ್ತು ಹೃದಯವಂತನಾಗಿರುವ ನನ್ನ ತಂದೆ ಮೋತಿ ದದ್ಲಾನಿ ಅವರನ್ನು ಕಳೆದ ರಾತ್ರಿ ಕಳೆದುಕೊಂಡಿದ್ದೇನೆ. ಜೀವನ ಪೂರ್ತಿ ಉತ್ತಮ ತಂದೆಯಾಗಿರಲು ಮತ್ತು ಉತ್ತಮ ವ್ಯಕ್ತಿಯಾಗಿರುವಂತೆ ನಾನು ಎಂದಿಗೂ ಕೇಳಲಿಲ್ಲ. ನನ್ನಲ್ಲಿ ಏನಾದರೂ ಒಳ್ಳೆಯದು ಅಂತ ಇದ್ದರೆ, ಅದು ಅವರಿಂದ ಮಾತ್ರ. ಅವರು ಕಳೆದ 3/4 ದಿನಗಳಿಂದ ಐಸಿಯುನಲ್ಲಿದ್ದರು. ಆದರೆ ನಿನ್ನೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನನ್ನ ತಾಯಿಯ ಜೊತೆ ಕೂಡ ನನಗೆ ಇರಲು ಸಹ ಸಾಧ್ಯವಾಗುತ್ತಿಲ್ಲ. ಇದು ನಿಜವಾಗಿಯೂ ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಹುಬಲಿ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್‍ಗೆ ಕೊರೊನಾ ಪಾಸಿಟಿವ್
Advertisement
View this post on Instagram
Advertisement
ಅದೃಷ್ಟವಶಾತ್ ನನ್ನ ಸಹೋದರಿ ನಾನು ಮಾಡುವುದಕ್ಕಿಂತ ಹೆಚ್ಚಿನ ಶಕ್ತಿಯಿಂದ ಎಲ್ಲವನ್ನು ನಿಭಾಯಿಸುತ್ತಿದ್ದಾಳೆ. ನನ್ನ ತಂದೆ ಇಲ್ಲದ ಜಗತ್ತಿನಲ್ಲಿ ಹೇಗೆ ಬದುಕಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಸಂಪೂರ್ಣವಾಗಿ ಎಲ್ಲವನ್ನು ಕಳೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಿನ್ಸ್ ಮಹೇಶ್ ಬಾಬುಗೆ ಕೊರೊನಾ ಪಾಸಿಟಿವ್