ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್

Public TV
1 Min Read
1535393347 Duplicate driving license

ಬೆಂಗಳೂರು: ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭವಾಗಲಿದೆ.

ಡಿಎಲ್/ ಎಲ್‍ಎಲ್ ಲೈಸೆನ್ಸ್ ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಈ ಪರೀಕ್ಷೆ ನಡೆಯಲಿದೆ. ಪ್ರತಿದಿನ ಶೇ.50 ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ದಿನಾಂಕವನ್ನು ಆರ್‌ಟಿಒ ಅಭ್ಯರ್ಥಿಗಳ ಮೊಬೈಲ್‍ಗೆ ಸಂದೇಶ ಕಳುಹಿಸಿದೆ.

5877475 012420 wls coronavirus 10p vid

ಹಸಿರು ವಲಯದಲ್ಲಿರುವ 14 ಜಿಲ್ಲೆಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದ್ದು, ಉಳಿದ ಕಿತ್ತಳೆ ಮತ್ತು ಕೆಂಪು ವಲಯದಲ್ಲಿ ಲೈಸೆನ್ಸ್ ಹೊರತು ಪಡಿಸಿ ವಾಹನ್-4 ತಂತ್ರಾಶದ ಅಡಿಯಲ್ಲಿ ವಾಹನಗಳ ನೋಂದಣಿ, ವಾಹನದ ವರ್ಗಾವಣೆ ಅರ್ಹತಾ ಪತ್ರ ನವೀಕರಣ ಇತ್ಯಾದಿ ಸೇವೆಗಳು ಲಭ್ಯವಾಗಲಿದೆ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಆದೇಶ ಪ್ರಕಟಿಸಿದ್ದಾರೆ.

ಕಚೇರಿಗೆ ಹಾಜರಾಗುವ ಸಂದರ್ಭದಲ್ಲಿ ಕೋವಿಡ್ 19 ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಒಳಪಡಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *