ಭುವನೇಶ್ವರ: ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಒಡಿಶಾದ ಸರ್ಕಾರಿ ನೌಕರರು ಒಂದು ವಾರ ರಜೆ ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ ಬಳಿಕ ರಜೆಯನ್ನು ತೆಗೆದುಕೊಳ್ಳಬಹುದು. ಪ್ರಸ್ತುತ ಕೊರೊನಾ ಮೂರನೇ ಅಲೆ ಇರುವುದರಿಂದ ಯಾವುದೇ ಉದ್ಯೋಗಿ ಕೊರೊನಾ ಸೋಂಕಿಗೆ ಒಳಗಾದಲ್ಲಿ 7 ದಿನಗಳವರೆಗೂ ರಜೆಯನ್ನು ನೀಡಲು ನಿರ್ಧರಿಸಲಾಗಿದೆ. ಈ ನಿರ್ದೇಶನವು ತಕ್ಷಣವೇ ಜಾರಿ ಬರಲಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಮುನ್ನ ಕೊರೊನಾ ವೈರಸ್ ಪಾಸಿಟಿವ್ ಹೊಂದಿರುವ ಸರ್ಕಾರಿ ನೌಕರರಿಗೆ 14 ದಿನಗಳವರೆಗೂ ರಜೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಅಯೋಧ್ಯೆ ಅಲ್ಲ, ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ
Advertisement
Advertisement
ಮತ್ತೊಂದೆಡೆ ಕೆಲವು ದಿನಗಳ ಹಿಂದೆಯಷ್ಟೇ ವಿಕಲಾಂಗರಿಗೆ ಮತ್ತು ನಗರ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ವರ್ಕ್ ಫ್ರಮ್ ಹೋಮ್ ಮಾಡಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅವಕಾಶ ನೀಡಿತ್ತು. ಈ ನೌಕರರು ಇನ್ನು ಮುಂದೆ ಕಚೇರಿಗಳಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಡಿಡಿಎಂಎ ತಿಳಿಸಿತ್ತು.
Advertisement
Advertisement
ಪಿಎಸ್‍ಯುಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೆ ಆಗಮಿಸುವ ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕಚೇರಿಗೆ ಆಗಮಿಸುವ ಬದಲಾಗಿ ಮನೆಯಲ್ಲಿಯೇ ಕೆಲಸ ಮಾಡಲು ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್ ಸಿಎಂ ಮನವಿ ಪತ್ರ