ಕೋವಿಡ್‍ನಿಂದ ಕಡಿಮೆಯಾಯ್ತು ಜೀವಿತಾವಧಿ – ಹೊಸ ಅಧ್ಯಯನದಲ್ಲಿ ಭಾರತೀಯರಿಗೆ ಶಾಕಿಂಗ್ ನ್ಯೂಸ್

Public TV
1 Min Read
covid

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದಿಂದ ಭಾರತೀಯರ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ. 2019ಕ್ಕೆ ಹೋಲಿಸಿದರೇ 2020ಕ್ಕೆ ಎರಡು ವರ್ಷಗಳ ಜೀವಿತಾವಧಿ ಕಡಿಮೆಯಾಗಿದೆ ಎಂದು ಹೊಸ ಸಂಶೋಧನೆ ಹೇಳಿದೆ.

covid

ಮುಂಬೈ ಮೂಲದ ಇಂಟರ್‌ನ್ಯಾಶನಲ್ ಇನ್‍ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್‍ನಿಂದ ಈ ಅಧ್ಯಯನ ನಡೆದಿದ್ದು, 145 ರಾಷ್ಟ್ರಗಳ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಜಿಬಿಡಿ) ಅಧ್ಯಯನ ಮತ್ತು ಕೋವಿಡ್ ಇಂಡಿಯಾ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಪೋರ್ಟಲ್ ವಿಶ್ಲೇಷಣೆಗಾಗಿ ಸಂಗ್ರಹಿಸಿದ ಡೇಟಾವನ್ನು ಬಳಸಿ ಸಂಶೋಧನೆ ನಡೆಸಲಾಗಿದೆ.  ಇದನ್ನೂ ಓದಿ:  ಅಮಿತ್ ಶಾ ಜಮ್ಮು & ಕಾಶ್ಮೀರ ಭೇಟಿ – ತೀವ್ರ ಕುತೂಹಲ

COVID

ಈ ಅಧ್ಯಯನ ವರದಿ BMC ಪಬ್ಲಿಕ್ ಹೆಲ್ತ್‌ನಲ್ಲಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ವರದಿಯಲ್ಲಿ ಭಾರತೀಯರ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಉಲ್ಲೇಖಿಸಿದೆ. ಅಧ್ಯಯನದ ಪ್ರಕಾರ 2020 ರಲ್ಲಿ ಮಹಿಳೆಯರ ಜೀವಿತಾವಧಿ 67.5 ಮತ್ತು 69.8 ವರ್ಷಕ್ಕೆ ಕುಸಿತ ಕಂಡಿದೆ. ಇದು 2019 ರಲ್ಲಿ 69.5 ವರ್ಷಗಳು ಮತ್ತು 72 ವರ್ಷಗಳಿತ್ತು.  ಇದನ್ನೂ ಓದಿ:  ಪ್ರಜ್ವಲ್ ರೇವಣ್ಣಗಿನ್ನೂ ಮದ್ವೆನೇ ಆಗಿಲ್ಲ, ತಾತನಿಂದ ಒಳ್ಳೇದನ್ನ ತಿಳ್ಕೋಬೇಕು: ಸೋಮಣ್ಣ ವ್ಯಂಗ್ಯ

covid

35-69 ವರ್ಷದ ನಡುವಿನ ಮಹಿಳೆಯರಲ್ಲಿ, 35-79 ವರ್ಷದ ಪುರುಷರಲ್ಲಿ ಕೊರೊನಾ ಹೆಚ್ಚು ಪತ್ತೆಯಾಗಿತ್ತು. ಕೊರೊನಾದಿಂದ ಈ ವಯೋಮಾನದ ಜನರು ಸಾವನ್ನಪ್ಪಿದರು. ಹೀಗಾಗಿ ಇದೇ ವಯೋಮಾನದ ಜನರ ಜೀವಿತಾವಧಿ ಕಡಿಮೆಯಾಗಿದೆ ಎನ್ನಲಾಗಿದೆ. ಇನ್ನು ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಉತ್ತಮ ಎನ್ನಲಾಗಿದ್ದು ಅಮೆರಿಕಾ, ಇಂಗ್ಲೆಂಡ್ ಸೇರಿ ಹಲವು ದೇಶಗಳಲ್ಲಿ 2.28 ವರ್ಷಕ್ಕೆ ಜೀವಿತಾವಧಿ ಕುಸಿದಿದೆ ಎಂದು ವರದಿ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *