ನವದೆಹಲಿ: ದೆಹಲಿ, ಉತ್ತರಪ್ರದೇಶ, ಕೇರಳ, ಮಹಾರಾಷ್ಟçಗಳಲ್ಲಿ ಈಗಾಗಲೇ ಕೋವಿಡ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ತಮಿಳುನಾಡಿನ ಐಐಟಿ ಯಲ್ಲೂ 11 ಕೊರೊನಾ ಪ್ರಕರಣಗಳು ವರದಿಯಾಗಿರುವುದು ಕಂಡುಬಂದಿದೆ. ನಿನ್ನೆ 171 ಇದ್ದ ಪ್ರಕರಣಗಳ ಸಂಖ್ಯೆ ಇಂದು 182ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Advertisement
ಭಾರತದಾದ್ಯಂತ ಕಳೆದ 24 ಗಂಟೆಯಲ್ಲಿ ಹೊಸದಾಗಿ 3,377 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 17,801ಕ್ಕೆ ಏರಿಕೆಯಾಗಿದ್ದು, 60 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 4,30,72,176ಕ್ಕೆ ಏರಿಕೆಯಾಗಿದ್ದು, ಒಟ್ಟು ಮೃತರ ಸಂಖ್ಯೆ 5,23,753ಕ್ಕೆ ಏರಿಕೆಯಾಗಿದೆ. 17,801 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. 24 ಗಂಟೆಯಲ್ಲಿ 2,496 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದು, ಇದರೊಂದಿಗೆ ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಒಟ್ಟು 4,25,30,622 ಮಂದಿ ಗುಣಮುಖರಾಗಿದ್ದಾರೆ. ಇದನ್ನೂ ಓದಿ: ಭಾಷಣದ ವೇಳೆ ಕಣ್ಣೀರು ಹಾಕಿದ ಓವೈಸಿ
Advertisement
Advertisement
ಒಂದೇ ದಿನದಲ್ಲಿ 821 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ದೇಶದಲ್ಲಿ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.74ರಷ್ಟಾಗಿದ್ದು, ಪ್ರತಿ ದಿನದ ಪಾಸಿಟಿವಿಟಿ ದರ ಶೇ.0.91ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.0.63ರಷ್ಟಿರುವುದಾಗಿ ಅಂಕಿ-ಅಂಶ ವಿವರಿಸಿದೆ. ಇದನ್ನೂ ಓದಿ: ಬಡ ಮುಸ್ಲಿಮರ ಮೇಲೆ ಬಿಜೆಪಿ ಸಮರ ಸಾರಿದೆ: ಓವೈಸಿ ಕಿಡಿ