ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗಿದೆ. ಆದರೆ ಯಾರು ಆತಂಕ ಪಡಬೇಡಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯೇ ಇದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
Advertisement
ಮಹಾರಾಷ್ಟ್ರದ ಬಳಿಕ ಅತೀ ಹೆಚ್ಚು ಓಮಿಕ್ರಾನ್ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಸದ್ಯ ಈ ಕುರಿತಂತೆ ಸುದ್ದಿಗೋಷ್ಟಿ ನಡೆಸಿದ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದೆ. ಆದರೆ ಯಾರೂ ಭಯಪಡುವ ಅಗತ್ಯವಿಲ್ಲ. ಪ್ರಸ್ತುತ, ನಗರದಲ್ಲಿ 6,360 ಸಕ್ರಿಯ ಪ್ರಕರಣಗಳಿದ್ದು, ಇಂದು, 3,100 ಹೊಸ ಪ್ರಕರಣಗಳನ್ನು ವರದಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಶನಿವಾರ ಕೇವಲ 246 ಆಸ್ಪತ್ರೆಯಲ್ಲಿ ಬೆಡ್‍ಗಳು ಭರ್ತಿಯಾಗಿದೆ ಮತ್ತು ಸೋಂಕಿತರೆಲ್ಲರೆಲ್ಲರೂ ಯಾವುದೇ ರೋಗ ಗುಣಲಕ್ಷಣಗಳ ಕಂಡು ಬಂದಿಲ್ಲ. ಕೊರೊನಾ ಎರಡನೇ ಅಲೆಗೆ ಹೋಲಿಸಿದರೆ ಈಗ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ
Advertisement
दिल्ली में कोरोना संक्रमण की वर्तमान स्थिति पर महत्वपूर्ण प्रेस कॉन्फ़्रेंस | LIVE https://t.co/qliIQHzdx0
— Arvind Kejriwal (@ArvindKejriwal) January 2, 2022
Advertisement
ಇಲ್ಲಿಯವರೆಗೂ 82 ಆಕ್ಸಿಜನ್ ಬೆಡ್‍ಗಳು ಭರ್ತಿಯಾಗಿದ್ದು, ದೆಹಲಿ ಸರ್ಕಾರ 37,000 ಬೆಡ್‍ಗಳನ್ನು ಸೋಂಕಿತರಿಗೆ ಸಿದ್ಧಪಡಿಸಿದೆ. ಸೋಂಕಿತರೆಲ್ಲರಿಗೂ ಯಾವುದೇ ಗುಣ ಲಕ್ಷಣಗಳು ಇಲ್ಲದೇ ಇರುವ ಕಾರಣ ಭಯಪಡುವ ಅಗತ್ಯವಿಲ್ಲ. ಡಿಸೆಂಬರ್ 29 ರಂದು ಸುಮಾರು 2,000 ಇದ್ದ ಕೊರೊನಾ ಸಕ್ರಿಯ ಪ್ರಕರಣಗಳು ಜನವರಿ 1ಕ್ಕೆ 6,000ಕ್ಕೆ ಏರಿಕೆಯಾಗಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ. ದೆಹಲಿಯಲ್ಲಿ ಶನಿವಾರ 2,716 ಹೊಸ ಪ್ರಕರಣಗಳು ವರದಿಯಾಗಿದ್ದು, ಕೊರೊನಾ ಪ್ರಕರಣದಲ್ಲಿ ಭಾರೀ ಏರಿಕೆಯಾಗಿದೆ. ಇದನ್ನೂ ಓದಿ: 8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್