ಬೆಂಗಳೂರು: ಚೀನಾದಲ್ಲಿ ಡೆಡ್ಲಿ ಕೊರೊನಾ (Corona Virus) ರೂಪಾಂತರಿಯ ಅಬ್ಬರ ಜೋರಾಗಿದ್ದು ಚೀನಾ ಅಕ್ಷರಶಃ ನಲುಗಿ ಹೋಗಿದೆ. ಈಗಾಗಲೇ ಭಾರತದಲ್ಲೂ (India) ಚೀನಾದ ಬಿಎಫ್.7 ಉಪತಳಿ (BF7 Variant) ಪತ್ತೆಯಾಗಿದ್ದು, ರಾಜ್ಯದಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ (Government Of Karnataka) ಹಲವು ಕ್ರಮಗಳನ್ನ ಜಾರಿಗೊಳಿಸಿದೆ.
Advertisement
ಮುಂದಿನ 3 ತಿಂಗಳು ಅಲರ್ಟ್ ಆಗಿರಲು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳನ್ನ ಎಚ್ಚರಿಸಿದ್ದು, ನಮ್ಮ ರಾಜ್ಯವೂ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಈ ಬಾರಿ ಹೊಸ ವರ್ಷಕ್ಕೆ ಮಾತ್ರವಲ್ಲದೇ ವೈಕುಂಠ ಏಕಾದಶಿ ಸಂಕ್ರಾಂತಿ ಸಂಭ್ರಮದ ಮೇಲೂ ಕೊರೊನಾ ಕರಿನೆರಳು ಆವರಿಸಿದೆ. ಪ್ರತಿ ವಾರವೂ ಕೊರೊನಾ ಮಾರ್ಗಸೂಚಿಗಳ (Covid Guidelines) ಅವಲೋಕನ ಮಾಡಿಕೊಳ್ಳಲಾಗುತ್ತಿದ್ದು, ಕೊಂಚ ಕೇಸ್ ಏರಿಕೆಯಾದ್ರೂ ಮುಂದಿನ 90 ದಿನಗಳಿಗೆ ನಿಯಮಗಳು ನಿರ್ಣಾಯಕವಾಗಲಿದೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ‘ಆಪರೇಷನ್ ಡಿ’ ಸಿನಿಮಾ
Advertisement
Advertisement
ಧಾರ್ಮಿಕ ಕಾರ್ಯಕ್ರಮಗಳ ಮೇಲೂ ನಿಗಾ: ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಮಾತ್ರವಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಜನ ಸೇರುವುದನ್ನು ಕಡಿವಾಣ ಹಾಕಲು ದೇವಸ್ಥಾನಗಳಿಗೂ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ
Advertisement
ಕ್ರಮಗಳು ಏನೇನು ಬರಲಿವೆ?: ವೈಕುಂಠ ಏಕಾದಶಿ ದಿನ ಭಕ್ತರು ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡುವುದು, ದೇವಸ್ಥಾನದ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ಅಳವಡಿಸುವುದು, ಜನಜಂಗುಳಿ ತಡೆಯಲು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಂಕ್ರಾಂತಿ ಹಬ್ಬಕ್ಕೆ (Sankranti Festival) ಜನಜಂಗುಳಿ ತಡೆಯಲು ಈಗಿನಿಂದಲೇ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.