ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಆರಂಭದಲ್ಲೇ ಎಲ್ಲ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಎಲ್ಲೇ ಹೋದರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈಗಾಗಲೇ ನಾಲ್ವರು ಸಚಿವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಆಹಾರ ವಿತರಣೆ, ದಿನಸಿ ವಿತರಣೆ ಎನ್ನುವ ನೆಪದಲ್ಲಿ ಗುಂಪು ಸೇರಿಸಬಾರದು. ಕ್ಷೇತ್ರದ ಪ್ರವಾಸದ ಸಂದರ್ಭದಲ್ಲಿ ಕೂಡಾ ಎಚ್ಚರದಿಂದಿರಿ ಎಂದು ಸೂಚಿಸಿದ್ದಾರೆ.
Advertisement
Advertisement
ಒಂದೊಮ್ಮೆ ಸಚಿವರಿಗೆ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಕಷ್ಟ ಆಗಲಿದೆ. ಇಲ್ಲಿ ತನಕ ಮಾಡಿದ್ದ ಪ್ರಯತ್ನ ಎಲ್ಲವೂ ವ್ಯರ್ಥವಾಗಲಿದೆ. ನೀವು ಜನರಿಗೆ ಮಾದರಿ ಆಗಬೇಕು ಎಂದು ಸಿಎಂ ಕಿವಿಮಾತನ್ನು ಎಲ್ಲ ಸಚಿವರಿಗೆ ಹೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
ವಾಹಿನಿಯ ಕ್ಯಾಮೆರಾಮನ್‍ಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದರಿಂದ ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಸುಧಾಕರ್ ಹಾಗೂ ಸಿ.ಟಿ.ರವಿ ಹೋಮ್ ಕ್ವಾರಂಟೈನ್ ನಲ್ಲಿದ್ದು ಇಂದಿನ ಕ್ಯಾಬಿನೆಟ್ ಸಭೆಗೆ ಗೈರಾಗಿದ್ದರು.
Advertisement
ಮಂಡ್ಯ #COVID19 ಸಭೆಯಲ್ಲಿ ಸಚಿವ ನಾರಾಯಣಗೌಡರು, ಸಂಸದೆ @sumalathaA, ಶಾಸಕರುಗಳಾದ ಶ್ರೀನಿವಾಸ, ರವೀಂದ್ರ ಶ್ರೀಕಂಠೇಗೌಡ, CS ಪುಟ್ಟರಾಜು, ಡಾ.ಅನ್ನದಾನಿ, ಅಪ್ಪಾಜಿಗೌಡ, KT ಶ್ರೀಕಂಠೇಗೌಡ, ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಸ್ವಸಹಾಯ ಗುಂಪುಗಳನ್ನು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದೇನೆ. pic.twitter.com/CLL6TUMiPc
— Dr Sudhakar K (@mla_sudhakar) April 29, 2020
ಕೊರೊನಾ ಸೋಂಕಿತ ಕ್ಯಾಮೆರಾಮನ್ 24ರಂದೇ ಆಸ್ಪತ್ರೆಗೆ ದಾಖಲಾಗಿದ್ದು, ಆ ದಿನದಿಂದಲೇ ಸಚಿವರ ಕ್ವಾರಂಟೈನ್ ಆಗಬೇಕಿತ್ತು. ಹೋಮ್ ಕ್ವಾರಂಟೈನ್ ಆಗುವ ಅವಧಿ 14 ದಿನ ಅಂತ ಮಾರ್ಗಸೂಚಿಯಲ್ಲಿದೆ. ಬುಧವಾರ ಸುಧಾಕರ್ ಮಂಡ್ಯದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಕ್ವಾರಂಟೈನ್‍ನಲ್ಲಿ ಇರಬೇಕಾದವರು ಎಲ್ಲಂದರಲ್ಲಿ ಓಡಾಡಬಹುದೇ? ಜನರಿಗೊಂದು ನ್ಯಾಯ? ಸಚಿವರಿಗೊಂದು ನ್ಯಾಯವೇ ಎಂಬ ಪ್ರಶ್ನೆ ಎದ್ದಿತ್ತು.
ಕೋವಿಡ್19 ಪಾಸಿಟಿವ್ ಬಂದಿರುವ ಟಿವಿ ಪತ್ರಕರ್ತರ ಜೊತೆ ನಾನು ಕೂಡ ಸಂಪರ್ಕಕ್ಕೆ ಬಂದಿರುವ ವಿಷಯ ಗೊತ್ತಾದ ಹಿನ್ನಲೆಯಲ್ಲಿ, ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೇನೆ, ನೆಗೆಟಿವ್ ಬಂದಿದೆ. ಹಾಗಿದ್ದರೂ, ಮುನ್ನೆಚ್ಚರಿಕೆಯಿಂದ 7 ದಿನ ನನ್ನ ಮನೆಯಲ್ಲೆ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದೇನೆ, ಅಲ್ಲಿಂದಲೇ ಕರ್ತವ್ಯವನ್ನು ನಿರ್ವಹಿಸುತ್ತೇನೆ.
— Dr Sudhakar K (@mla_sudhakar) April 29, 2020
ಡಿಕೆಶಿ ಪ್ರಶ್ನೆ: ಕ್ಯಾಮೆರಾಮನ್ ಜೊತೆ ಸಿಎಂ, ಡಿಸಿಎಂ, ಸಚಿವರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಆದರೆ ಅವರು ಯಾಕೆ ಕ್ವಾರಂಟೈನ್ ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವಿಟ್ಟರ್‍ನಲ್ಲಿ ಪ್ರಶ್ನೆ ಕೇಳಿದ್ದರು. ಈ ಟ್ವೀಟ್ ಬೆನ್ನಲ್ಲೇ ಸುಧಾಕರ್ ಟ್ವೀಟ್ ಮಾಡಿ ನಾನು ಹೋಮ್ ಕ್ವಾರಂಟೈನ್‍ನಲ್ಲಿದ್ದೇನೆ ಎಂದು ತಿಳಿಸಿದ್ದರು.
A Kannada News channel's cameraman is COVID +ve. His primary contacts include CM, DCM & Ministers.
Why aren't they in quarantine? Isn't it double standards by those who must set an example to citizens?
This is a protocol violation. This Govt is not serious about fighting COVID. pic.twitter.com/PxgXzF4SId
— DK Shivakumar (@DKShivakumar) April 29, 2020
ಸೆಲ್ಫ್ ಕ್ವಾರಂಟೈನ್: ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದ ಬೊಮ್ಮಾಯಿ, ಅಶ್ವಥ್ ನಾರಾಯಣ, ಸಿಟಿ ರವಿ, ಸುಧಾಕರ್ ಅವರ ಪರೀಕ್ಷೆ ನಡೆದಿದ್ದು, ನೆಗೆಟಿವ್ ಬಂದಿದೆ. ಸೋಮಣ್ಣ ಅವರ ಪರೀಕ್ಷಾ ವರದಿ ಬರಬೇಕಿದೆ.
ಕೋವಿಡ್19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬಹುದೆಂಬ ಮಾಹಿತಿ ಪಡೆದಿದ್ದು, ನಾನು ಹೋಂ ಕ್ವಾರಂಟೈನ್ ಆಗಿರುತ್ತೇನೆ.
ನನ್ನ ಟೆಸ್ಟ್ ನೆಗೆಟಿವ್ ಬಂದಿದ್ದು, ಜಾಗರೂಕತೆಗಾಗಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತೇನೆಂದು ತಿಳಿಸ ಬಯಸುತ್ತೇನೆ.
— Dr. Ashwathnarayan C. N. (@drashwathcn) April 29, 2020
ಪತ್ರಕರ್ತರು ಕ್ವಾರಂಟೈನ್: ಕ್ಯಾಮೆರಾಮನ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಪತ್ರಕರ್ತರು ಈಗಾಗಲೇ ಕ್ವಾರಂಟೈನ್ ನಲ್ಲಿದ್ದಾರೆ. ಏ.20 ರಿಂದ 22ರವರೆಗೆ ಸೋಂಕಿತ ಕ್ಯಾಮೆರಾಮನ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ, ವಿಧಾನಸೌಧಕ್ಕೆ ಭೇಟಿ ನೀಡಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ, ಸಿಟಿ ರವಿ, ಸೋಮಣ್ಣ, ಸುಧಾಕರ್ ಅವರ ಸಂದರ್ಶನವನ್ನು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಕಾರಿನಲ್ಲೇ ಕುಳಿತುಕೊಂಡು ಮಾತನಾಡಿದ್ದಾರೆ.
Recently a Cameraman working for a kannada news channel had tested positive for #COVID19.
Even though I had no close interaction with him during my meetings, I got myself tested on 28th April.
I am happy to share with You that I have tested negative for #CoronaVirus. pic.twitter.com/PpAms4u77B
— C T Ravi ???????? ಸಿ ಟಿ ರವಿ (@CTRavi_BJP) April 29, 2020
ನೆಗೆಟಿವ್ ಬಂದಿದೆ: ಡಿಕೆ ಶಿವಕುಮಾರ್ ಟ್ವೀಟ್ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿಟಿ ರವಿ ಟ್ವೀಟ್ ಮಾಡಿ, ಪಾಸಿಟಿವ್ ಬಂದ ಕ್ಯಾಮೆರಾಮೆನ್ ಜೊತೆ ಸಭೆಯಲ್ಲಿ ಹತ್ತಿರದಿಂದ ಯಾವುದೇ ಸಂಪರ್ಕ ಆಗದೇ ಇದ್ದರೂ ನಾನು ಏ.28ರಂದು ಪರೀಕ್ಷೆ ಎದುರಿಸಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.