ನವದೆಹಲಿ: ಕೊರೊನಾ ವೈರಸ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಭಾರತಕ್ಕೆ ಮೊದಲ ಬ್ಯಾಚಿನ 3 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ಗಳು ಲ್ಯಾಂಡ್ ಆಗಲಿದೆ.
ಚೀನಾದ ಗುವಾಂಗ್ಜ್ ನಲ್ಲಿ ಕಸ್ಟಮ್ಸ್ ನಿಂದ ಒಪ್ಪಿಗೆ ಸಿಕ್ಕಿದ್ದು ಇಂದು ಸಂಜೆ ನವದೆಹಲಿಗೆ ಬರಲಿದೆ. ಒಟ್ಟು ಮೂರು ಕಂಪನಿಗಳಿಂದ ಭಾರತ ಈ ಕಿಟ್ ಗಳನ್ನು ಆಮದು ಮಾಡಿಕೊಳ್ಳುತ್ತಿದೆ.
Advertisement
ಈ ಹಿಂದೆ ಜರ್ಮನಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಇಸ್ರೇಲ್ ದೇಶಗಳಿಗೆ ಚೀನಾದಿಂದ ಪರೀಕ್ಷೆ ನಡೆಸುವ ಕಿಟ್ ಗಳು ರಫ್ತು ಆಗಿತ್ತು. ಈ ದೇಶಗಳ ಆರೋಗ್ಯ ಸಚಿವಾಲಯಗಳು ಈ ಕಿಟ್ ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಿರಸ್ಕರಿಸಿತ್ತು.
Advertisement
Advertisement
ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾದ ಬಳಿಕ ಚೀನಾ ಸರ್ಕಾರ ಗುಣಮಟ್ಟದ ಟೆಸ್ಟ್ ಕಿಟ್ ತಯಾರಿಸುವ ಕಂಪನಿಯನ್ನು ಪಟ್ಟಿ ಮಾಡಿ ವಿವಿಧ ರಾಷ್ಟ್ರಗಳಿಗೆ ನೀಡಿತ್ತು. ಅಷ್ಟೇ ಅಲ್ಲದೇ ಚೀನಾದ ಕಸ್ಟಮ್ಸ್ ವಿಭಾಗವೂ ಈ ಕಿಟ್ ಗಳನ್ನು ಪರೀಕ್ಷೆ ಮಾಡಿ ನಂತರ ಒಪ್ಪಿಗೆ ನೀಡುತ್ತಿದೆ.
Advertisement
ಭಾರತ ಸರ್ಕಾರ ಆರ್ಡರ್ ಮಾಡಿದ ಪ್ರಕಾರ ಏ.6ಕ್ಕೆ 7 ಲಕ್ಷ ಕಿಟ್ ಗಳು ಬರಬೇಕಿತ್ತು. ಆದರೆ ಲಾಜಿಸ್ಟಿಕ್ಸ್ ಸಮಸ್ಯೆ ಮತ್ತು ಪರೀಕ್ಷಾ ಕಾರಣದಿಂದ ತಡವಾಗಿ ರವಾನೆಯಾಗುತ್ತಿದೆ.
ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬಂದಿರುವ ಹಾಟ್ ಸ್ಪಾಟ್ ಗಳಲ್ಲಿನ ವ್ಯಕ್ತಿಗಳನ್ನು ಪರೀಕ್ಷೆ ನಡೆಸಲು ಈ ಕಿಟ್ ಬಳಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ 30 ಲಕ್ಷ ಕೊರೊನಾ ಕಿಟ್ ಗಳು ಆಮದು ಆಗಲಿದೆ.