ನವದೆಹಲಿ: ಕಾರ್ಖಾನೆ, ಕೈಗಾರಿಗೆ ಮತ್ತು ಸಂಸ್ಥೆಗಳನ್ನು ಆರಂಭಿಸುವ ಮುನ್ನ ಕೊರೊನಾ ಸೋಂಕು ಪತ್ತೆಗಾಗಿ ಪೂಲ್ ಟೆಸ್ಟ್ ಮಾಡುವಂತೆ ಎಲ್ಲಾ ಮುಖ್ಯಸ್ಥರುಗಳಿಗೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.
ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಲಾಕ್‍ಡೌನ್ ನಿಯಮಗಳಿಗೆ ವಿನಾಯತಿ ನೀಡಲಾಗಿದೆ. ಪರಿಣಾಮ ಕೆಲವು ಸಂಸ್ಥೆಗಳು, ಕೈಗಾರಿಕೆ, ಕಾರ್ಖಾನೆ ಸೇರಿದಂತೆ ಸಣ್ಣ ಉದ್ದಿಮೆಗಳು ಆರಂಭವಾಗಲಿದೆ. ಕಾರ್ಖಾನೆ ಆರಂಭಕ್ಕೂ ಮುನ್ನ ಕಾರ್ಮಿಕರನ್ನು ತಪಾಸಣೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.
Advertisement
Advertisement
‘ಪೂಲ್ ಮಾದರಿ’ ಎಂದರೆ ಉದ್ಯೋಗಿಗಳನ್ನು ಗುಂಪುಗಳಾಗಿ ವಿಂಗಡಿಸಿ ಪರೀಕ್ಷೆ ನಡೆಸುವುದು. ಸಂಸ್ಥೆಯೊಂದರಲ್ಲಿ 150 ಮಂದಿ ಉದ್ಯೋಗಿಗಳಿದ್ದರೇ ಐದು ಮಂದಿಯ ತಂಡಗಳಾಗಿ ಮೂವತ್ತು ಗುಂಪುಗಳಾಗಿ ವಿಂಗಡಿಸುವುದು. ಪ್ರತಿ ಐದು ಜನರಿಗೆ ಒಂದು ಪೂಲ್ ಮಾಡಿ ಅದರಲ್ಲಿ ಒಬ್ಬರನ್ನು ತಪಾಸಣೆ ನಡೆಸುವುದು.
Advertisement
ರೋಗದ ಲಕ್ಷಣಗಳು ಆಧರಿಸಿ ತಪಾಸಣೆ ನಡೆಸಬೇಕು ಇದರಲ್ಲಿ ಒಬ್ಬರಿಗೆ ಸೋಂಕು ಕಂಡು ಬಂದರೂ ಬಳಿಕ ಎಲ್ಲ ಉದ್ಯೋಗಿಗಳನ್ನು ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ. ಇದಲ್ಲದೆ ಆಗಾಗೆ ಈ ಪರೀಕ್ಷೆಗಳು ನಡೆಯಲಿ ಎಂದು ಗೃಹ ಇಲಾಖೆ ತಿಳಿಸಿದೆ.