ಬೀಜಿಂಗ್: ಚೀನಾದ ಶಾಂಘೈನಲ್ಲಿ ಕೊರೊನಾ ಸೋಂಕು ಹರಡುವಿಕೆ ಕಡಿಮೆ ಆಗಿದ್ದು, ಇಂದಿನಿಂದ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳು ಮತ್ತು ರೆಸ್ಟೋರೆಂಟ್‍ಗಳನ್ನು ಪುನಃ ಆರಂಭಿಸಲು ಅನುಮತಿ ನೀಡಲಾಗಿದೆ.
2 ತಿಂಗಳುಗಳ ಕಾಲ ಲಾಕ್ ಆಗಿದ್ದ ಶಾಂಘೈ ಪುನಃ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಮಂದಿಯಲ್ಲಿ 10 ಲಕ್ಷ ಮಂದಿ ಲಾಕ್‍ಡೌನ್‍ನಿಂದ ಹೊರ ಬಂದಿದ್ದಾರೆ. ಶಾಂಘೈನ 16 ಜಿಲ್ಲೆಗಳಲ್ಲಿ 15 ಜಿಲ್ಲೆಗಳು ಲಾಕ್‍ಡೌನ್ ತೆಗೆದು ಹಾಕಿವೆ ಎಂದು ಉಪ ಮೇಯರ್ ಜೊಂಗ್ ಮಿಂಗ್ ಹೇಳಿದ್ದಾರೆ.
Advertisement
Advertisement
ಇಂದಿನಿಂದ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳು ಮತ್ತು ರೆಸ್ಟೋರೆಂಟ್‍ಗಳನ್ನು ಜನರ ಸಂಖ್ಯೆಯ ಮಿತಿಗಳೊಂದಿಗೆ ಪುನಃ ತೆರೆಯಲು ಅನುಮತಿಸಲಾಗಿದೆ. ಆದರೆ ಬೇರೆ ಪ್ರದೇಶಕ್ಕೆ ಹೋಗುವ ಕುರಿತು ನಿರ್ಬಂಧಗಳು ಜಾರಿಯಲ್ಲಿವೆ. ಅಷ್ಟೇ ಅಲ್ಲದೇ ಸುರಂಗಮಾರ್ಗ ರೈಲು ವ್ಯವಸ್ಥೆಯನ್ನು ಸದ್ಯಕ್ಕೆ ಮುಚ್ಚಲಾಗಿದೆ. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್
Advertisement
Advertisement
ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ, ನಗರ ಮತ್ತು ರಾಷ್ಟ್ರೀಯ ಅಧಿಕಾರಿಗಳು ಶಾಂಘೈನ ಸ್ಥಿತಿಯ ಬಗ್ಗೆ ಮಿಶ್ರ ಅಭಿಪ್ರಾಯಗಳನ್ನು ನೀಡಿದ್ದಾರೆ. ಕೊರೊನಾ ಸೋಂಕು ಕಡಿಮೆ ಆಗಿರುವುದರಿಂದ ನಗರದ ಜನ ಜೀವನವು ಸಹಜ ಸ್ಥಿತಿಗೆ ಮರಳಬಹುದು. ಪೂರ್ಣ ಪುನಾರಂಭಕ್ಕಾಗಿ ಜೂನ್ 1ರಂದು ದಿನಾಂಕವನ್ನು ನಿಗದಿಗೊಳಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು