ಬೆಂಗಳೂರು: ಕೊರೊನಾ, ಒಮಿಕ್ರಾನ್ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಇಂದು ಬೆಂಗಳೂರಿನಲ್ಲಿ ಹೊಸದಾಗಿ 2,718 ಪ್ರಕರಣಗಳು ದೃಢಪಟ್ಟಿದ್ದು, 15 ಮಂದಿ ಮೃತಪಟ್ಟಿದ್ದಾರೆ
ರಾಜ್ಯದಾದ್ಯಂತ 24 ಗಂಟೆ ಅವಧಿಯಲ್ಲಿ 6,151 ಹೊಸ ಪ್ರಕರಣಗಳು ದೃಢಪಟ್ಟಿದ್ದು, 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇ 6.19ರಷ್ಟಿದ್ದು, ಮರಣ ಪ್ರಮಾಣ ಶೇ 0.79ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇಂದು 16,802 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 87,080 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಹೊಸದಾಗಿ 2,718 ಪ್ರಕರಣಗಳು ದೃಢಪಟ್ಟಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಸದ್ಯ 35,631 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 60, ಬಳ್ಳಾರಿ 154, ಬೆಳಗಾವಿ 321, ಬೆಂಗಳೂರು ಗ್ರಾಮಾಂತರ 70, ಬೆಂಗಳೂರು ನಗರ 2718, ಬೀದರ್ 34, ಚಾಮರಾಜನಗರ 397, ಚಿಕ್ಕಬಳ್ಳಾಪುರ 102, ಚಿಕ್ಕಮಗಳೂರು 51, ಚಿತ್ರದುರ್ಗ 161, ದಕ್ಷಿಣ ಕನ್ನಡ 90, ದಾವಣಗೆರೆ 35, ಧಾರವಾಡ 149, ಗದಗ 31, ಹಾಸನ 219, ಹಾವೇರಿ 102, ಕಲಬುರಗಿ 117, ಕೊಡಗು 195, ಕೋಲಾರ 77, ಕೊಪ್ಪಳ 133, ಮಂಡ್ಯ 182 ಮೈಸೂರು 285, ರಾಯಚೂರು 49, ರಾಮನಗರ 25, ಶಿವಮೊಗ್ಗ 177, ತುಮಕೂರು 210, ಉಡುಪಿ 85, ಉತ್ತರ ಕನ್ನಡ 106, ವಿಜಯಪುರ 73 ಮತ್ತು ಯಾದಗಿರಿಯಲ್ಲಿ 25 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ದೇಶದಲ್ಲಿ ಕೊರೊನಾ ಮೂರನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ದಿನದ ಕೇಸ್‍ಗಳ ಸಂಖ್ಯೆ ಜನವರಿ 6ರ ನಂತರ ಇದೇ ಮೊದಲ ಬಾರಿಗೆ ಒಂದು ಲಕ್ಷಕ್ಕಿಂತ ಕಡಿಮೆ ಬಂದಿದೆ. 11.56 ಲಕ್ಷ ಟೆಸ್ಟ್ ನಡೆಸಿದ್ರೆ 83,876 ಕೇಸ್‍ಗಳಷ್ಟೇ ವರದಿ ಆಗಿವೆ. ಕೇರಳದಲ್ಲಿಯೂ ಕೂಡ ಕೊರೊನಾ ಕೇಸ್ ಗಣನೀಯವಾಗಿ ಇಳಿಕೆ ಕಂಡಿದೆ. ದೇಶದಲ್ಲಿ ಪಾಸಿಟಿವಿಟಿ ರೇಟ್ 7.25ಕ್ಕೆ ಇಳಿದಿದೆ. ಸಕ್ರಿಯ ಕೇಸ್‍ಗಳ ಸಂಖ್ಯೆ 11 ಲಕ್ಷಕ್ಕೆ ಕುಸಿದಿದೆ. ಕಳೆದ ಒಂದು ವಾರಕ್ಕೆ ಹೋಲಿಸಿದ್ರೆ ಸಾವಿನ ಪ್ರಮಾಣವೂ ಕಡಿಮೆ ಆಗಿದೆ.