ಬೆಂಗಳೂರು: ಶುಕ್ರವಾರ ರಾತ್ರಿಯಿಂದ ಶುರುವಾಗಬೇಕಿದ್ದ ವಾರಾಂತ್ಯದ ಕರ್ಫ್ಯೂ ಬಹುಷಃ ಇರಲಿಕ್ಕಿಲ್ಲ. ವಿಕೆಂಡ್ ಕರ್ಫ್ಯೂಗೆ ವ್ಯಕ್ತವಾಗ್ತಿರುವ ಜನಾಕ್ರೋಶ ಮತ್ತು ಪಕ್ಷದಲ್ಲಿಯೇ ಕೇಳಿಬರುತ್ತಿರುವ ಅಪಸ್ವರದ ಕಾರಣದಿಂದಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.
ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಉನ್ನತಮಟ್ಟದ ಸಭೆ ಕರೆದಿದ್ದು, ಈ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದತಿ ತೀರ್ಮಾನ ತೆಗೆದುಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಬೆಂಗಳೂರು ಪೊಲೀಸ್ ಇಲಾಖೆಗೆ ವೀಕೆಂಡ್ ಕರ್ಫ್ಯೂ ಹಿಂಪಡೆಯುವ ಸುಳಿವನ್ನು ರವಾನಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ
Advertisement
Advertisement
ಇದೇ ವೇಳೆ, ನೈಟ್ ಕರ್ಫ್ಯೂ ಅವಧಿಯನ್ನು ಕಡಿತ ಮಾಡುವುದು ಸಹ ಹೆಚ್ಚು ಕಡಿಮೆ ಫಿಕ್ಸ್ ಆಗಿದೆ. ರಾತ್ರಿ 11ರಿಂದ ರಾತ್ರಿ ನೈಟ್ ಕರ್ಫ್ಯೂ ಶುರುವಾಗಿ ಬೆಳಗಿನ ಜಾವ ಐದಕ್ಕೆಲ್ಲಾ ಅಂತ್ಯವಾಗುವ ನಿರೀಕ್ಷೆಯಿದೆ. ಆದರೆ ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಈಗಿರುವ 50-50 ನಿಯಮಗಳನ್ನು ಮಾತ್ರ ಮುಂದುವರೆಸುವ ಸಾಧ್ಯತೆ ಇದೆ. ಜೊತೆಗೆ ಮದುವೆ, ಸಭೆ, ಸಮಾರಂಭ ಮತ್ತು ಪಾದಯಾತ್ರೆಗಳ ಮೇಲೆ ಈ ಹಿಂದಿನ ನಿರ್ಬಂಧಗಳೇ ಮುಂದುವರೆಯುವ ಸಂಭವ ಇದೆ.
Advertisement
ಸಚಿವ ಸುಧಾಕರ್ ಕೂಡ ರೂಲ್ಸ್ ರಿಲೀಫ್ ಸುಳಿವು ನೀಡಿದ್ದು, ಜನರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ದಿನಕ್ಕೆ 1.25 ಲಕ್ಷ ಕೇಸ್ ಬರಬಹುದು. ಹೀಗಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
Advertisement
ರಾಜ್ಯದಲ್ಲಿ ಏಕರೂಪ ಮಾರ್ಗಸೂಚಿ ಬದಲು ಬೆಂಗಳೂರಿಗೊಂದು, ರಾಜ್ಯಕ್ಕೊಂದು ಮಾರ್ಗಸೂಚಿ ಜಾರಿಗೊಳಿಸುವ ಬಗ್ಗೆ ಸಚಿವರಾದ ಈಶ್ವರಪ್ಪ ಹಾಗೂ ಆರ್. ಅಶೋಕ್ ಸುಳಿವು ನೀಡಿದ್ದಾರೆ. ಜೀವ, ಜೀವನ ಎರಡೂ ಮುಖ್ಯ ಎಂದಿದ್ದಾರೆ. ಡಿಕೆ ಶಿವಕುಮಾರ್ ಮಾತಾಡಿ, ಲಂಡನ್‍ನಲ್ಲೂ ಇಲ್ಲ. ಹೈದರಾಬಾದನಲ್ಲೂ ಇಲ್ಲದ ರೂಲ್ಸ್ ಇಲ್ಯಾಕೆ? ಬದುಕಿದ್ದವನರನ್ನು ಸಾಯಿಸುವ ಕೆಲಸ ಮೊದಲು ನಿಲ್ಲಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಟೆಸ್ಟ್‌ಗೆ ಕಳುಹಿಸಿ 22 ದಿನದ ನಂತರ ಬಂತು ಒಮಿಕ್ರಾನ್ ವರದಿ – ಅಷ್ಟರಲ್ಲಿ ಗುಣಮುಖಳಾಗಿ ಡಿಸ್ಚಾರ್ಜ್ ಆಗಿದ್ಲು ಯುವತಿ!
ಶಾಸಕ ಅಜಯ್ ಸಿಂಗ್, ಕೇಸ್ ಕಮ್ಮಿ ಇದ್ದಾಗ ವೀಕೆಂಡ್ ಲಾಕ್‍ಡೌನ್ ಮಾಡಿದ್ದರು. ಈಗ ಜಾಸ್ತಿಯಾದಾಗ ತೆಗೆಯಲು ನೋಡುತ್ತಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಲೆಂದೇ ಸರ್ಕಾರ ವೀಕೆಂಡ್ ಲಾಕ್‍ಡೌನ್ ಜಾರಿ ಮಾಡಿತ್ತು ಎಂಬುದು ಸ್ಪಷ್ಟವಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಮುಂದಿರುವ ಆಯ್ಕೆಗಳು ಏನು?
1. ಇಡೀ ರಾಜ್ಯಕ್ಕೆ ಒಂದೇ ಮಾರ್ಗಸೂಚಿ ತರುವುದು
2. ಬೆಂಗಳೂರು ಮತ್ತು ಇತರೆಡೆಗೆ ಪ್ರತ್ಯೇಕ ಮಾರ್ಗಸೂಚಿ
3. ಬೆಂಗಳೂರಲ್ಲಿ ಮಾತ್ರ ವೀಕೆಂಡ್ ಕರ್ಫ್ಯೂ ಮುಂದುವರಿಕೆ
4. ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಕೆಲವಕ್ಕೆ ವಿನಾಯ್ತಿ (ಹೊಟೇಲ್, ಎಂಆರ್‌ಪಿ, ರೆಸ್ಟೋರೆಂಟ್‍ಗಳಿಗೆ ಕೆಲ ವಿನಾಯಿತಿ. ದಿನಸಿ, ತರಕಾರಿ, ಬೀದಿಬದಿ ವ್ಯಾಪಾರ, ಮಾಂಸ ಮಾರಾಟಕ್ಕೆ ಸಮಯ ನಿಗದಿ)
5. ಸೋಂಕಿಲ್ಲದ ಜಿಲ್ಲೆಗಳಿಗೆ ವೀಕೆಂಡ್ ಕರ್ಫ್ಯೂ ರಿಲೀಫ್ ನೀಡುವುದು
6. ಜಿಲ್ಲಾಧಿಕಾರಿಗಳಿಗೆ ಇನ್ನಷ್ಟು ಮಾರ್ಗಸೂಚಿ ಜಾರಿ ಅಧಿಕಾರ