ಉದ್ದೇಶಪೂರ್ವಕವಾಗಿ ಚೀನಾದಿಂದ ಸುಳ್ಳು ಮಾಹಿತಿ – 5 ದೇಶಗಳ ಗುಪ್ತಚರ ವರದಿಯಲ್ಲಿದೆ ಸ್ಫೋಟಕ ವಿಷಯ

Public TV
1 Min Read
corona china

ನ್ಯೂಯಾರ್ಕ್: ಇಲ್ಲಿಯವರೆಗೆ ಅಮೆರಿಕ ಚೀನಾ ವಿರುಧ್ಧ ಧ್ವನಿ ಎತ್ತುತ್ತಿತ್ತು. ಆದರೆ ಈಗ ಚೀನಾ ವಿರೋಧಿ ದೇಶಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ.

ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದೆ. ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳದ ಕಾರಣ ಲಸಿಕೆ ಕಂಡುಹಿಡಿಯುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಐದು ದೇಶಗಳ ಗುಪ್ತಚರ ಸಂಸ್ಥೆಗಳ ವರದಿ ತಿಳಿಸಿದೆ.

wuhan

ಅಮೆರಿಕ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳ ಗುಪ್ತಚರ ಸಂಸ್ಥೆಗಳು 15 ಪುಟಗಳ ವರದಿಯನ್ನು ತಯಾರಿಸಿದೆ.

ವರದಿಯಲ್ಲಿ ಏನಿದೆ?
ಚೀನಾ ಆರಂಭದಲ್ಲೇ ಕೊರೊನಾ ವೈರಸ್ ವಿಚಾರವನ್ನು ಮುಚ್ಚಿಟ್ಟಿತ್ತು. ಜನರಿಂದ ಜನರಿಗೆ ವೈರಸ್ ಹರಡುವುದಿಲ್ಲ ಎಂದು ತಿಳಿಸಿತ್ತು. ಚೀನಾದ ಈ ವಾದವನ್ನೇ ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿ ಪ್ರಕಟಿಸಿತ್ತು. ಇದಾದ 2 ವಾರಗಳ ನಂತರ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂದು ತಿಳಿಸಿತ್ತು.

who corona 1

ಚೀನಾ ಆರಂಭದಲ್ಲಿ ವಿಚಾರ ಮುಚ್ಚಿಟ್ಟದ್ದರಿಂದ ವೈರಸ್ ಸುಲಭವಾಗಿ ವಿಶ್ವದೆಲ್ಲೆಡೆ ಹರಡಿತು. ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಸ್ ಬಗ್ಗೆ ಮಾತನಾಡದಂತೆ ನೋಡಿಕೊಂಡಿತು.

ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಸಂಬಂಧಿಸಿದಂತೆ ಪ್ರಯೋಗ ನಡೆಯುತಿತ್ತು. ಆ ಲ್ಯಾಬ್‍ನಲ್ಲಿದ್ದ ಎಲ್ಲ ಸಾಕ್ಷ್ಯಗಳನ್ನು ಉದ್ದೇಶಪೂರ್ವಕಜವಾಗಿ ನಾಶ ಮಾಡಲಾಯಿತು.

china virus Wuhan corona

ಸರ್ಚ್ ಎಂಜಿನ್ ನಲ್ಲಿ ಕೊರೊನಾ ವೈರಸ್ ಕೀವರ್ಡ್ ಗಳನ್ನು ತೆಗೆದು ಹಾಕಿತು. ಇದರ ಬೆನ್ನಲ್ಲೇ ಸೋಂಕಿಗೆ ಔಷಧಿ ಪತ್ತೆ ಹಚ್ಚಲು ವಿಶ್ವದ ವಿಜ್ಞಾನಿಗಳಿಗೆ ವೈರಸ್ ಮಾದರಿಯನ್ನು ನೀಡಲು ಚೀನಾ ನಿರಾಕರಿಸಿತು.

ರಾಜಧಾನಿ ಬೀಜಿಂಗ್ ನಲ್ಲಿ ಜ.23ರಂದೇ ಲಾಕ್‍ಡೌನ್ ಘೋಷಿಸಿತ್ತು. ಇದರ ಜೊತೆ ತನ್ನ ದೇಶದ ಪ್ರಜೆಗಳಿಗೆ ಪ್ರಯಾಣ ನಿರ್ಬಂಧ ಹೇರಿತ್ತು. ಬೇರೆ ದೇಶಗಳಿಗೆ ಈ ರೀತಿಯ ಲಾಕ್‍ಡೌನ್ ಅಗತ್ಯವಿಲ್ಲ ಎಂಬುದಾಗಿ ಹೇಳಿತ್ತು. ಕೊರೊನಾ ವೈರಸ್ ಮಾಹಿತಿ ಹಂಚುವ ವಿಚಾರದಲ್ಲಿ ಸುಳ್ಳು ಹೇಳಿದ ಪರಿಣಾಮ ವಿಶ್ವದ ಇತರ ದೇಶಗಳು ಈ ಆರಂಭದಲ್ಲೇ ಸೋಂಕನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ ಎಂಬ ಸ್ಫೋಟಕ ವಿಚಾರಗಳು ವರದಿಯಲ್ಲಿವೆ.

Share This Article
Leave a Comment

Leave a Reply

Your email address will not be published. Required fields are marked *