ನವದೆಹಲಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧಿ ನಿಯಂತ್ರಕ (ಡಿಸಿಜಿಐ) ಮಂಗಳವಾರ ಅನುಮೋದನೆ ನೀಡಿದೆ.
ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಮೂಗಿನ ಮೂಲಕ ನೀಡುವ ಮೊದಲ ಕೋವಿಡ್-19 ಲಸಿಕೆ ಇದಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು, ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಇದು ದೊಡ್ಡ ಉತ್ತೇಜನ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಮನೆಗೆ ನೀರು ನುಗ್ಗಿ ನಷ್ಟವಾದರೆ ಅದಕ್ಕೆ ಕಾರ್ಪೊರೇಷನ್ ಹೊಣೆ – 9 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Advertisement
Advertisement
ಈ ಹೆಜ್ಜೆಯು ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಸಾಮೂಹಿಕ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಜ್ಞಾನ ಮತ್ತು ಮಾನವ ಸಂಪನ್ಮೂಲಗಳನ್ನು COVID-19 ವಿರುದ್ಧದ ಹೋರಾಟದಲ್ಲಿ ಬಳಸಿಕೊಂಡಿದೆ ಎಂದು ಮಾಂಡವಿಯಾ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
Advertisement
Advertisement
ವಿಜ್ಞಾನ ಆಧಾರಿತ ವಿಧಾನ ಮತ್ತು ಸಬ್‌ಕಾ ಪ್ರಯಾಸ್ ಘೋಷಣೆಗೆ ಬದ್ಧರಾಗಿ ನಾವು ಕೋವಿಡ್ -19 ಅನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ ಆನೆಗಳ ರೌಂಡ್ಸ್ – ವೀಡಿಯೋ ವೈರಲ್