ಲಕ್ನೋ: ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಜೂನ್ 30ರವರೆಗೆ ರಾಜ್ಯದಲ್ಲಿ ಯಾವುದೇ ಸಭೆ, ಸಾರ್ವಜನಿಕ ಸಮಾರಂಭಗಳನ್ನು ನಡೆಸಲು ಅನುಮತಿ ನೀಡದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ -19 ಬಗ್ಗೆ ರಾಜ್ಯದ 11 ಸಮಿತಿಗಳ ಅಧ್ಯಕ್ಷರ ಜೊತೆ ಸಭೆ ನಡೆಸಿದ ಬಳಿಕ ಈ ಮಹತ್ವದ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ. ಈ ವೇಳೆ ಜನ ರಂಜಾನ್ ತಿಂಗಳಿನಲ್ಲಿ ಜನರು ಮನೆಯಲ್ಲೇ ಪ್ರಾರ್ಥನೆ ನಡೆಸಬೇಕೆಂದು ಸಿಎಂ ಮನವಿ ಮಾಡಿದ್ದಾರೆ.
Advertisement
मुख्यमंत्री श्री @myogiadityanath जी ने अपने सरकारी आवास, लखनऊ पर कोरोना वायरस के संबंध में अधिकारियों के साथ वीडियो कॉन्फ्रेंसिंग की। pic.twitter.com/7BZST36mAl
— CM Office, GoUP (@CMOfficeUP) April 24, 2020
Advertisement
ಉತ್ತರ ಪ್ರದೇಶದಲ್ಲಿ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಕಡಿಮೆ ಪ್ರಕರಣ ಇರುವ ಜಿಲ್ಲೆಗಳಲ್ಲೂ ಲಾಕ್‍ಡೌನ್ ಸರಿಯಾಗಿ ಆಗಬೇಕೆಂದು ಸಿಎಂ ಸೂಚಿಸಿದ್ದಾರೆ.
Advertisement
ಉತ್ತರ ಪ್ರದೇಶದಲ್ಲಿ 1,621 ಮಂದಿಗೆ ಕೊರೊನಾ ಬಂದಿದ್ದು, 247 ರೋಗಿಗಳು ಗುಣಮುಖವಾಗಿದ್ದಾರೆ. 25 ಮಂದಿ ಸಾವನ್ನಪ್ಪಿದ್ದಾರೆ.
Advertisement
मुख्यमंत्री श्री @myogiadityanath जी ने अपने सरकारी आवास, लखनऊ पर प्रदेश में #COVID19 के संबंध में गठित समितियों के अध्यक्षों के साथ समीक्षा बैठक की। pic.twitter.com/5CXOofcO0m
— CM Office, GoUP (@CMOfficeUP) April 25, 2020