ಬೆಂಗಳೂರು: ಕೊರೊನಾ ಸೋಂಕು ಏರಿಕೆ ನಡುವೆಯೊಂದು ಗುಡ್ ನ್ಯೂಸ್. ಪಾಸಿಟಿವಿಟಿ ದರ ಏರಿಕೆಯಾದರೂ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಕಡಿಮೆಯಿದೆ.
ಮಂಗಳವಾರದ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 73,260 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ ಶೇ.6 ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡನೇ ಅಲೆಗೆ ಹೋಲಿಸಿದರೆ 5 ಪಟ್ಟು ಕಡಿಮೆ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement
Advertisement
ಕಳೆದ 10 ದಿನದಲ್ಲಿ 62 ಸಾವಿರ ಜನರಿಗೆ ಸೋಂಕು ಬಂದಿದ್ದರೆ ಆಸ್ಪತ್ರೆಗೆ 3,700 ಮಂದಿ ದಾಖಲಾಗಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಶೇ. 0.1 ರಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.93 ರಷ್ಟು ಜನ ಹೋಂ ಐಸೋಲೇಷನಲ್ಲಿದ್ದಾರೆ. ಇದನ್ನೂ ಓದಿ: ಕೋವಿಡ್ 3ನೇ ಅಲೆ – ರಾಜ್ಯಗಳ ಜೊತೆ ನಾಳೆ ಮೋದಿ ಸಭೆ
Advertisement
Advertisement
ಎಲ್ಲಿ ಎಷ್ಟು ಮಂದಿ?
73,260 ಸಕ್ರಿಯ ಸೋಂಕಿತರು ಪೈಕಿ ಆಸ್ಪತ್ರೆಯಲ್ಲಿರುವವರು 3,761 ಮಂದಿ ದಾಖಲಾಗಿದ್ದಾರೆ. ಹೋಂ ಐಸೋಲೇಷನ್‌ಲ್ಲಿ 57 ಸಾವಿರ ಮಂದಿ ಇದ್ದರೆ ಕೋವಿಡ್ ಸೆಂಟರ್‌ಗೆ 425 ಮಂದಿ ದಾಖಲಾಗಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದವರಿಗೆ ಆನ್‍ಲೈನ್ ಯೋಗ ಕ್ಲಾಸ್: ಕೇಜ್ರಿವಾಲ್
ಬೆಡ್ ವಿವರ:
ಸಾಮಾನ್ಯ ಹಾಸಿಗೆ 3,511, ಆಕ್ಸಿಜನ್ ಹಾಸಿಗೆ 178, ಐಸಿಯು ಹಾಸಿಗೆ 53, ವೆಂಟಿಲೇಟರ್‌ನಲ್ಲಿ 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.