ನವದೆಹಲಿ: ಭಾರತದಂತಹ ದೊಡ್ಡ ದೇಶದಲ್ಲಿ ಕೋವಿಡ್-19 ಸೋಂಕು ಪ್ರತಿಹಂತಗಳನ್ನು ತಲುಪಿದ್ದು, ಜನರು ಈ ಹಂತದಲ್ಲಿ ವೈರಾಣುವಿನೊಂದಿಗೆ ಜೀವಸುವುದನ್ನು ಕಲಿಯ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
Advertisement
ಎಪಿಡೆಮಿಕ್ ಹಂತದಲ್ಲಿ ಸೋಂಕು ಹರಡುವ ಲಕ್ಷಣಗಳು ಕಡಿಮೆ ಮತ್ತು ಮಧ್ಯಮ ಮಟ್ಟದಲ್ಲಿರುತ್ತದೆ. ಜನ ಈ ಹಂತದಲ್ಲಿ ವೈರಾಣುವಿನೊಂದಿಗೆ ಜೀವಸುವುದನ್ನು ಕಲಿಯುತ್ತಾರೆ ಎಂದು ಸ್ಥಳೀಯ ಮಾಧ್ಯವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ವುಹಾನ್ ಲ್ಯಾಬ್ ತನಿಖೆಗೆ ಮುಂದಾದ WHO – ಚೀನಾದಿಂದ ವಿರೋಧ
Advertisement
Advertisement
ಭಾರತದಂತಹ ದೊಡ್ಡ ದೇಶದ ಜನಸಂಖ್ಯೆ, ಇಲ್ಲಿನ ವೈವಿಧ್ಯತೆಗಳನ್ನು ಗಮನಿಸಿದರೆ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ರೋಗ ನಿರೋಧಕ ಶಕ್ತಿಗಳನ್ನು ಕಾಣಬಹುದು ಹಾಗಾಗಿ ಇಲ್ಲಿ ಸೋಂಕಿನ ಏರಿಳಿತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
Advertisement
ಕೋವ್ಯಾಕ್ಸಿನ್ ಕ್ಲಿಯರೆನ್ಸ್ ನೀಡುವ ಬಗ್ಗೆ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಕೋವ್ಯಾಕ್ಸಿನ್ ಕುರಿತು ತೃಪ್ತಿದಾಯಕ ಅಭಿಪ್ರಾಯ ಹೊಂದಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕ್ಲಿಯರೆನ್ಸ್ ನೀಡುವ ಸಾಧ್ಯತೆ ಇದೆ. ಕೆಲದಿನಗಳ ಅಧ್ಯಯನದಲ್ಲಿ ತಿಳಿದು ಬಂದ ಪ್ರಕಾರ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಹೆಚ್ಚು ಹರಡುತ್ತಿಲ್ಲ. ಹಾಗಾಗಿ ಇದು ಎಪಿಡೆಮಿಕ್ ಹಂತ ತಲುಪುತ್ತಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇನ್ನೆರಡು ವರ್ಷದಲ್ಲಿ ಕೊರೊನಾ ಕಾಣೆಯಾಗುತ್ತೆ: WHO
ಮಕ್ಕಳಿಗೂ ಕೊರೊನಾ ಸೋಂಕು ತಗುಲಿದೆ ಹಾಗೂ ಅವರಿಂದ ಬೇರೆಯವರಿಗೂ ಹರಡಿದೆ, ಆದರೆ ಮಕ್ಕಳಲ್ಲಿ ಕಂಡುಬರುವ ಸೋಂಕಿನ ತೀವ್ರತೆ ಕಡಿಮೆ ಪ್ರಮಾಣದಲ್ಲಿದೆ ಎಂದು ತಿಳಿದುಬಂದಿದ್ದು, ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರು ವಯಸ್ಕರಲ್ಲಿ ಕಂಡುಬಂದಂತಹ ಸಾವು ನೋವುಗಳಂತೆ ಮಕ್ಕಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಮುಂದೆ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಚಿಕಿತ್ಸೆಗಾಗಿ ಆಸ್ಪತ್ರೆಗಳು ಸಜ್ಜಾಗಿರುವುದು ಉತ್ತಮ. 2022ರ ವೇಳೆಗೆ ಶೇ.70ರಷ್ಟು ಮಂದಿಗೆ ಲಸಿಕೆ ನೀಡಲಾಗಿರುತ್ತದೆ. ಬಳಿಕ ದೇಶ ಸಹಜ ಸ್ಥಿತಿಯತ್ತ ಮರಳಬಹುದು ಎಂದು ಅಭಿಪ್ರಾಯಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.65ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,259 ಕೊರೊನಾ ಕೇಸ್, 29 ಸಾವು