ನವದೆಹಲಿ: ಸಿಆರ್‌ಪಿಎಫ್‍ನ ಹಿರಿಯ ಅಧಿಕಾರಿಯೊಬ್ಬರ ಆಪ್ತ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ದೆಹಲಿಯಲ್ಲಿರುವ ಕೇಂದ್ರ ಕಚೇರಿಯನ್ನು ಸಂಪೂರ್ಣ ಸೀಲ್ ಮಾಡಲಾಗಿದ್ದು, ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.
ಸಿಆರ್‌ಪಿಎಫ್‍ನ ಹೆಚ್ಚುವರಿ ಮಹಾ ನಿರ್ದೇಶಕ ಜಾವೇದ್ ಅಖ್ತಾರ್ ಮತ್ತು ಅವರ ಸ್ಟೇನೋಗ್ರಾಫರ್ ಅವರನ್ನು ಇಂದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಸ್ಟೇನೋಗ್ರಾಫರ್ ನಲ್ಲಿ ಪಾಸಿಟಿವ್ ವರದಿ ಬಂದಿದ್ದರಿಂದ ಲೋಧಿ ರಸ್ತೆಯ ಸಿಜಿಓ ಕಾಂಪ್ಲೆಕ್ಸ್ ನಲ್ಲಿರುವ ಸಿಆರ್‌ಪಿಎಫ್ ಕಚೇರಿಯನ್ನು ಪ್ರೊಟೊಕಾಲ್ ಪ್ರಕಾರ ಸೀಲ್ ಮಾಡಲಾಯಿತು. ಇದನ್ನೂ ಓದಿ: 68 ಮಂದಿ ಸಿಆರ್‌ಪಿಎಫ್ ಯೋಧರಿಗೆ ಸೋಂಕು
Advertisement
Advertisement
ಈ ಮೊದಲು ಕೇಂದ್ರ ಕಚೇರಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಚಾಲಕನಿಗೂ ಕೊರೊನಾ ಸೋಂಕು ಇರುವುದು ಪತ್ತೆಯಾಗಿರುವುದರಿಂದ ಇತರೆ ನೌಕರರು ಕೆಲಸ ಮಾಡಲು ಅವಕಾಶವನ್ನು ನೀಡಿಲ್ಲ. ನೌಕರರು ಕೇಂದ್ರ ಕಚೇರಿ ಕಟ್ಟಡಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ಸಿ.ಆರ್.ಪಿ.ಎಫ್ ಮೂಲಗಳು ತಿಳಿಸಿವೆ.
Advertisement
ಹೆಚ್ಚುವರಿ ಮಹಾ ನಿರ್ದೇಶಕರ ಕುಟುಂಬ, ಮನೆ ಸಿಬ್ಬಂದಿ ಮತ್ತು ಇವರ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಹಿರಿಯ ಅಧಿಕಾರಿಗಳು ಎಲ್ಲ ಸಿಬ್ಬಂದಿ ಮತ್ತು ಅವರ ಮನೆಗಳನ್ನು ಸೀಲ್ ಮಾಡಿದ್ದು, ಕ್ವಾರಂಟೈನ್‍ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
Advertisement
ಇದಕ್ಕೂ ಮೊದಲು ದೆಹಲಿಯ ಮಯೂರ್ ವಿಹಾರ್ ಫೇಸ್ 3ರಲ್ಲಿರುವ ಸಿಆರ್‍ಪಿಎಫ್ ನ ಮೂರನೇ ಬೆಟಾಲಿಯನ್‍ನಲ್ಲಿ 144 ಯೋಧರಿಗೆ ಸೋಂಕು ಕಾಣಿಸಿಕೊಂಡಿದೆ. ಈವರೆಗೂ ಓರ್ವ ಯೋಧ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಚೇತರಿಸಿಕೊಂಡಿದ್ದು ಇನ್ನು 20 ಮಂದಿಯ ವರದಿ ನಿರೀಕ್ಷೆಯಲ್ಲಿದೆ.