ಯಾದಗಿರಿ: ಸರ್ಕಾರದ ಕೋವಿಡ್ ಪರಿಹಾರ ಚೆಕ್ ಬೌನ್ಸ್ ಆಗಿರುವ ಘಟನೆಯೊಂದು ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಕೊರೊನಾ 2ನೇ ಅಲೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 1 ಲಕ್ಷ ರೂ. ಚೆಕ್ ನೀಡಿತ್ತು. ಆದರೆ ಇದು ನಗದೀಕರಣವೇ ಆಗುತ್ತಿಲ್ಲ. ಈ ಮೂಲಕ ನಾಮ್ಕಾವಾಸ್ತೆಗೆ ಕೋವಿಡ್ ಪರಿಹಾರ ನೀಡುತ್ತಿದೆಯೇ ಸರ್ಕಾರ ಎಂಬ ಪ್ರಶ್ನೆ ಎದ್ದಿದೆ.
Advertisement
ಬ್ಯಾಂಕ್ ಖಾತೆಗೆ ಚೆಕ್ ಹಣ ಜಮೆಯಾಗಿಲ್ಲ ಎಂದು ಕಾರಣ ಹೇಳಿ ಪರಿಹಾರದ ಚೆಕ್ ಅನ್ನು ಕೆಲವು ಬ್ಯಾಂಕ್ ಗಳು ಮರಳಿಸುತ್ತಿವೆ. ಹೀಗಾಗಿ ಫಲಾನುಭವಿಗಳು ಕೋವಿಡ್ ಪರಿಹಾರ ಹಣಕ್ಕಾಗಿ ಅಲೆದು ಅಲೆದು ಸಸ್ತಾಗಿದ್ದಾರೆ. ಇದನ್ನೂ ಓದಿ: ಕೆಲವರಿಗೆ ದೇಶ ಭಕ್ತಿ ಅರ್ಥವಾಗುವುದಿಲ್ಲ: ರಾಹುಲ್ ಗಾಂಧಿ
Advertisement
Advertisement
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಸಣ್ಣಗೌಡ ಎಂಬವರು ಕೋವಿಡ್ ನಿಂದ ಮೃತಪಟ್ಟಿದ್ದರು. ಪರಿಹಾರಕ್ಕಾಗಿ ಬಸಣ್ಣಗೌಡ ಮಗಳು ಅನಿತಾ ಎಲ್ಲಾ ದಾಖಲೆಗಳು ಸಲ್ಲಿಸಿದ್ದಳು. ಅರ್ಜಿದಾರರಿಗೆ 2021ರ ಡಿಸೆಂಬರ್ 17 ರಂದು ಸುರಪುರ ಶಾಸಕ ರಾಜೂಗೌಡ ಅವರೇ ಚೆಕ್ ವಿತರಿಸಿದ್ದರು. ಅನಿತಾ ಅವರಿಗೆ SBI ಶಾಖೆಯ 1 ಲಕ್ಷ ರೂ. ನೀಡಲಾಗಿತ್ತು. 406164 ಸಂಖ್ಯೆಯ ಅಕೌಂಟ್ ನಂಬರ್ ನಿಂದ 8 ಡಿ.2021 ರಂದು ನೀಡಲಾಗಿತ್ತು. ಈ ಚೆಕ್ ಅನ್ನು ಸುರಪುರ SBIಗೆ ನಗದೀಕರಣಕ್ಕಾಗಿ ಅನಿತಾ ಕಾಯುತ್ತಿದ್ದರು. ಆದರೆ ನಗದೀಕರಣ ಆಗಲ್ಲ, ಯಾದಗಿರಿಗೆ ಹೋಗುವಂತೆ ಬ್ಯಾಂಕ್ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆ ತಾಯಿಗಾಗಿ ಕಿಡ್ನಿ ಕೊಟ್ಟ- ಒಂದೇ ಕಿಡ್ನಿಯವ ಬೇಡವೆಂದು ಬೇರೆಯವ್ರ ಕೈ ಹಿಡಿದ್ಳು!
Advertisement
ಇತ್ತ ಯಾದಗಿರಿ SBI ಶಾಖೆಗೆ ಬಂದು ವಿಚಾರಿಸಿದರೂ ಬ್ಯಾಂಕ್ ಸಿಬ್ಬಂದಿ ಸ್ಪಂದಿಸಿಲ್ಲ. ಕೆಲವು ದಿನಗಳ ನಂತರ ಇತರೆ ಕಾರಣ ನೀಡಿ, ಏಉಃ ಬ್ಯಾಂಕ್ ನಿಂದ ಚೆಕ್ ಸಮೇತ ಚೀಟಿ ಬಂದಿದೆ. ಇತ್ತ ಮಹಾದೇವಿ ಎಂಬವರಿಗೆ ಸಹ ಇದೇ ರೀತಿ ಬ್ಯಾಂಕಿವರು ಸತಾಯಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಪರಿಹಾರ ಹಣ ಜನರ ಕೈ ಸೇರದೇ ಕಂಗಾಲಾಗಿದ್ದಾರೆ.