ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು (Covid 19) ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ (Health Department) ಸಹಾಯವಾಣಿ ಬಿಡುಗಡೆ ಮಾಡಿದೆ.
ಆರೋಗ್ಯ ಸಲಹೆಗಾಗಿ 18004258330 ನಂಬರ್‌ಗೆ ಕರೆ ಮಾಡಿ ಸಲಹೆ ಪಡೆಯಲು ಸಾರ್ವಜನಿಕರಿಗೆ ಇಲಾಖೆ ಸೂಚನೆ ನೀಡಿದೆ.
ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಏನು ಸಲಹೆ?
1. ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್ ಹಾಕಿ, ಸಾಮಾಜಿಕರ ಅಂತರ ಕಾಪಾಡಬೇಕು
2. ಉತ್ತಮ ನೈರ್ಮಲ್ಯ ಕಾಪಾಡಬೇಕು
3. ವಿದೇಶಗಳಿಂದ ಬರುವ ಪ್ರಯಾಣಿಕ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಲಹೆ
4. ಜ್ವರ, ಕೆಮ್ಮು, ತಲೆನೋವು, ಉಸಿರಾಟರ ಸಮಸ್ಯೆ ಇದ್ದರೆ ವೈದ್ಯರನ್ನ ಭೇಟಿ ಆಗಬೇಕು
5. ಆರೋಗ್ಯ ಸಲಹೆಗಾಗಿ ಸಹಾಯವಾಣಿ ಸಂಖ್ಯೆ 18004258330 ಗೆ ಕರೆ ಮಾಡಲು ಸೂಚನೆ
6. ಕೊವಿಡ್ ರೋಗಲಕ್ಷಣಗಳು ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿ, ಪರೀಕ್ಷೆಗೆ ಸಹಕರಿಸಿ
7. ಶಾಲೆಗಳಲ್ಲಿ ಕಣ್ಗಾವಲು ಇರಿಸಿ ರೋಗ ಲಕ್ಷಣ ಇರುವ ಮಕ್ಕಳನ್ನ ಶಾಲೆಗೆ ಕಳಿಸಬೇಡಿ
ಹೆಲ್ತ್ ಕೇರ್ ವರ್ಕರ್ಸ್ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ಕೊವಿಡ್ ಟೆಸ್ಟಿಂಗ್, ಟ್ರ್ಯಾಕಿಂಗ್, ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿ
1. 5% ಐಎಲ್ ಐ ಸ್ಯಾರಿ ಕೇಸ್ ಗಳ ಟೆಸ್ಟ್ ಮಾಡಬೇಕು
2. ಹೈ ರಿಸ್ಕ್ ವ್ಯಕ್ತಿಗಳಿಗೆ ಟೆಸ್ಟ್ ಮಾಡಬೇಕು
3. ಹೈ ರಿಸ್ಕ್ ಇರುವ ಮಕ್ಕಳು, ಗರ್ಭಿಣಿಯರು, ವೃದ್ದರಿಗೆ ಟೆಸ್ಟ್ ಮಾಡಬೇಕು
4. ಅಂದಿನ ಕೊವಿಡ್ ಕೇಸ್ ಡಿಟೇಲ್ಸ್ ಆ ದಿನವೇ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು
5. ಆಸ್ಪತ್ರೆಯ ಇನ್‌ಫೆಕ್ಷನ್ ಕಂಟ್ರೋಲ್ ಕಮಿಟಿ ಮಾನಿಟರ್ ಮಾಡಬೇಕು
ಶಾಲೆಗಳಿಗೆ ಹೊಸ ಮಾರ್ಗಸೂಚಿಯಲ್ಲಿ ಏನಿದೆ?
1. ಮಕ್ಕಳಿಗೆ ನೆಗಡಿ, ಜ್ವರ, ಕೆಮ್ಮು ಇದ್ರೆ ಶಾಲೆಗೆ ಕಳುಹಿಸದೇ ವೈದ್ಯರ ಸಲಹೆ ಪಡೆದುಕೊಂಡು ಸೂಕ್ತ ಚಿಕಿತ್ಸೆ, ಆರೈಕೆ ನೀಡಬೇಕು
2. ಜ್ವರ ಸಂಪೂರ್ಣ ಗುಣಮುಖವಾದ ಬಳಿಕ ಮಕ್ಕಳನ್ನ ಶಾಲೆಗೆ ಕಳಿಸಬೇಕು
3. ಶಾಲೆಗೆ ಬಂದ ನಂತ್ರ ಮಕ್ಕಳಲ್ಲಿ ಜ್ವರ ಶೀತ ಗುಣಲಕ್ಷಣಗಳು ಕಂಡುಬಂದ್ರೇ ತಕ್ಷಣ ಪೋಷಕರ ಗಮನಕ್ಕೆ ತಂದು ಮನೆಗೆ ಕಳುಹಿಸಬೇಕು
4. ಶಾಲಾ ಶಿಕ್ಷಕರಿಗೆ ಸಿಬ್ಬಂದಿಗೆ ಜ್ವರ, ಶೀತದಂತಹ ಲಕ್ಷಣ ಕಂಡುಬಂದ್ರೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
5. ಸ್ಯಾನಿಟೈಸ್ ಬಳಕೆ, ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಸೇರಿದಂತೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನ ಶಾಲೆಯಲ್ಲಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಕೊರೊನಾ ಪ್ರಕರಣ
ರಾಜ್ಯದಲ್ಲಿ ಕೋವಿಡ್ ಕೇಸ್ ಗಣನೀಯವಾಗಿ ಏರಿಕೆ ಕಂಡಿದೆ. ರಾಜ್ಯದ ಒಟ್ಟು ಆಕ್ಟೀವ್ ಕೇಸ್ 234 ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 150ಕ್ಕೂ ಹೆಚ್ಚು ಆಕ್ಟೀವ್ ಕೇಸ್‌ಗಳು ದಾಖಲಾಗಿದೆ. ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ. ಐಎಲ್ ಮತ್ತು ಸಾರಿ ಕೇಸ್‌ಗಳಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಲು ಸರ್ಕಾರ ಸೂಚಿಸಿದೆ. ಇನ್ನು ಬೆಂಗಳೂರಿನಲ್ಲಿ ಕೇಸ್ ಏರಿಕೆ ಆಗುತ್ತಿದ್ದು, ಕೋವಿಡ್ ನಿಯಂತ್ರಣ ಜೊತೆಗೆ ಡೆಂಗ್ಯೂ ಕಾಪಾಡಿಕೊಳ್ಳೋದು ಸವಾಲಾಗಿದೆ. ಮಳೆಗಾಲ ಆಗಿರುವುದರಿಂದ ಬಿಬಿಎಂಪಿ ಆರೋಗ್ಯ ವಿಭಾಗ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಬೆಂಗಳೂರಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ವು ಐಎಲ್‌ಐ, ಸಾರಿ ಕೇಸ್‌ಗಳು ಇವೆ ಎಂಬ ಮಾಹಿತಿ ಇದೆ. ಬಿಬಿಎಂಪಿಯ ಎಂಟು ವಲಯ ಮಹಾದೇವಪುರ, ಯಲಹಂಕ, ಪೂರ್ವ ವಲಯ, ಪಶ್ಚಿಮ ವಲಯ ಮತ್ತು ಬೆಂಗಳೂರು ದಕ್ಷಿಣದಲ್ಲೂ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಮತ್ತು ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅಂತಹವರ ಬಗ್ಗೆ ನಿಗಾವಹಿಸಲು ಪಾಲಿಕೆ ಮುಂದಾಗಿದೆ. ಆದರೆ ಮಹಾದೇವಪುರ ಬೆಂಗಳೂರು ದಕ್ಷಿಣ ವಲಯ ಜೊತೆಗೆ ಪೂರ್ವ ವಲಯದಲ್ಲಿ ಕೇಸ್ ಏರಿಕೆ ಆಗುತ್ತಿದೆ. ಪೂರ್ವ ವಲಯದಲ್ಲಿ 30ರ ಗಡಿ ದಾಟಿದೆ. ಮಹಾದೇವಪುರದಲ್ಲಿ ಆಕ್ಟೀವ್ ಕೇಸ್ 30ರ ಗಡಿ ದಾಟಿದೆ ಜೊತೆಗೆ ದಕ್ಷಿಣ ವಲಯದಲ್ಲೂ ಕೇಸ್ ಏರಿಕೆ ಆಗಿದೆ.
ಇನ್ನೂ ಡೆಂಗ್ಯೂ ಜೊತೆಗೆ ಕೋವಿಡ್ ಕಂಟ್ರೋಲ್ ಮಾಡಲು ಬಿಬಿಎಂಪಿ ಹಲವು ಕ್ರಮ ವಹಿಸುತ್ತಿದೆ. ಐಎಲ್‌ಐ ಮತ್ತು ಸಾರಿ ಕೇಸ್‌ಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ.