ನವದೆಹಲಿ: ದೇಶಾದ್ಯಂತ ಕೋವಿಡ್ ಕೇಸ್ (Covid Case) ಹೆಚ್ಚಾಗುತ್ತಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆ 4 ಸಾವಿರ ಗಡಿಯಲ್ಲಿದೆ. ಈ ಪೈಕಿ ಕೇರಳದಲ್ಲಿಯೇ (Kerala) 1,400 ಕೇಸ್ಗಳು ವರದಿಯಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (Ministry of Health and Family Welfare) ಮಾಹಿತಿ ಪ್ರಕಾರ, ಭಾರತದಲ್ಲಿ ಕೋವಿಡ್ ಕೇಸ್ಗಳ ಸಂಖ್ಯೆ 4 ಸಾವಿರದ ಗಡಿಯಲ್ಲಿದ್ದು, ಸೋಮವಾರ 3,961 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅತೀ ಹೆಚ್ಚು ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ತಲಾ ಒಬ್ಬೊಬ್ಬರಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.ಇದನ್ನೂ ಓದಿ: ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ
ಕೇರಳದಲ್ಲಿ 1,400, ಮಹಾರಾಷ್ಟ್ರ 506, ದೆಹಲಿ 483, ಗುಜರಾತ್ 338, ಪಶ್ಚಿಮ ಬಂಗಾಳ 331, ಕರ್ನಾಟಕ 253, ತಮಿಳುನಾಡು 189, ಉತ್ತರ ಪ್ರದೇಶ 157 ಪ್ರಕರಣಗಳು ದಾಖಲಾಗಿವೆ.
ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (Indian Council of Medical Research) ಮಹಾನಿರ್ದೇಶಕ ಡಾ.ರಾಜೀವ್ ಬೆಹ್ಲ್ ಅವರು ಮಾತನಾಡಿ, ಕೋವಿಡ್ನ ರೂಪಾಂತರಿಯಾದ ಓಮಿಕ್ರಾನ್ನ ನಾಲ್ಕು ಉಪರೂಪಾಂತರಗಳಾದ LF.7, XFG, JN.1 ಮತ್ತು NB.1.8.1 ಕಂಡುಬಂದಿವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯಕ್ಕೆ ಯಾವುದೇ ಗಂಭೀರ ಪರಿಣಾಮ ಬೀರಿಲ್ಲ. ನಾವೆಲ್ಲರೂ ಜಾಗರೂಕರಾಗಿರಬೇಕು. ಆದರೆ ಆತಂಕಪಡುವಂತದ್ದು ಏನಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಈ ಬಾರಿ ಐಪಿಎಲ್ನಲ್ಲಿ ಹೊಸ ಚಾಂಪಿಯನ್ – ಹಿಂದಿನ ಆರ್ಸಿಬಿ, ಪಂಜಾಬ್ ಫೈನಲ್ ಪಂದ್ಯಗಳು ಹೇಗಿತ್ತು?