ನವದೆಹಲಿ: ಕೋವಿಡ್-19 ಪ್ರಕರಣಗಳ ಇಳಿಕೆಯ ಮಧ್ಯೆ, ಕೊರೊನಾ ವೈರಸ್ ಜಾಗೃತಿ ಮತ್ತು ಮುನ್ನೆಚ್ಚರಿಕೆಗಳ ಕುರಿತು ಕಾಲರ್ ಟ್ಯೂನ್ ಅನ್ನು ನಿಲ್ಲಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್-19 ಕಾಲರ್ ಟ್ಯೂನ್ ಅನ್ನು ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ದೇಶವನ್ನು ಹಬ್ಬಿದಾಗ ಪ್ರಾರಂಭಿಸಲಾಯಿತು. ಇದನ್ನೂ ಓದಿ: ಒಟ್ಟು 48 ಕೇಸ್ – ಬೆಂಗಳೂರು ಸಹಿತ 4 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಪ್ರಕರಣ
Advertisement
ಏರ್‌ಟೆಲ್, ಬಿಎಸ್‍ಎನ್‍ಎಲ್, ರಿಲಯನ್ಸ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಆಪರೇಟರ್‌ಗಳು ತಮ್ಮ ಕಾಲರ್ ಟ್ಯೂನ್‍ಗಳನ್ನು ಮಾರ್ಚ್ 2020ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಬದಲಾಯಿಸಿದ್ದರು. ಆರಂಭದಲ್ಲಿ ಕೋವಿಡ್-19 ನಲ್ಲಿನ ಕಾಲರ್ ಟ್ಯೂನ್‍ಗಳಲ್ಲಿ ಜನರು ಕೆಮ್ಮುವುದು, ಸೀನುವುದು ಮತ್ತು ನಂತರ ಕೊರೊನಾ ವೈರಸ್‍ನಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸಲಹೆಯೊಂದಿಗೆ ಪ್ರಾರಂಭವಾಗುತ್ತಿತ್ತು. ಇದನ್ನೂ ಓದಿ: ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಜಗದೀಶ್ ಅರ್ಜಿ
Advertisement
Advertisement
ನಂತರದಲ್ಲಿ ಅದನ್ನ ಬದಲಾಯಿಸಲಾಯಿತು. ಹೊಸ ಸಂದೇಶವು ಜನರನ್ನು ಲಸಿಕೆ ಹಾಕುವಂತೆ ಮಾಹಿತಿ ನೀಡುತ್ತಿದೆ. ಪ್ರತಿ ತಿಂಗಳು ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಸೋಮವಾರ ಭಾರತದಲ್ಲಿ 1,270 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.