ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ (Valmiki Scam) ಇಡಿ (Enforcement Directorate) ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ಬಗ್ಗೆ ಕೋರ್ಟ್ ನಿರ್ಧಾರ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಹಗರಣದ ಕೇಸ್‌ನಲ್ಲಿ ಇಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ವಿಚಾರ ಮತ್ತು ಮಾಜಿ ಸಚಿವ ನಾಗೇಂದ್ರ ಮೇಲೆ ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ: ಪಾಕಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪ – ದೆಹಲಿಯಲ್ಲಿ ಲಘು ಕಂಪನ
ಇಡಿ ಅವರು ತನಿಖೆ ಮಾಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ವಿಶೇಷ ತನಿಖಾ ತಂಡ (Special Investigation Team) ತನಿಖೆ ಮಾಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಅಂತಿಮವಾಗಿ ನಿರ್ಧಾರವನ್ನು ಕೋರ್ಟ್ ತೆಗೆದುಕೊಳ್ಳುತ್ತದೆ ಎಂದರು.
ಕೋರ್ಟ್ ಏನು ತೀರ್ಮಾನ ಮಾಡುತ್ತದೆ ಎಂದು ನೋಡೋಣ. ತನಿಖೆ ಸಮಯದಲ್ಲಿ ದಾಖಲಾತಿಗಳನ್ನು ಸಂಗ್ರಹ ಮಾಡಿ ಚಾರ್ಜ್‌ಶೀಟ್‌ನಲ್ಲಿ ಹಾಕಿದ್ದಾರೆ. ಅದು ಸರಿಯೋ? ತಪ್ಪೋ? ಎಂದು ಕೋರ್ಟ್ ತಿಳಿಸುತ್ತದೆ. ಅಂತಿಮವಾಗಿ ಕೋರ್ಟ್ ಶಿಕ್ಷೆ ಏನು ನೀಡಬೇಕು ಎಂದು ತೀರ್ಮಾನ ನೀಡುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: ನನ್ನ ಗಮನಕ್ಕೆ ತರದೇ ಡಿವೋರ್ಸ್ ಘೋಷಿಸಿದ್ದಾರೆ: ಜಯಂ ರವಿ ವಿರುದ್ಧ ಆರತಿ ಆಕ್ರೋಶ