ಲಕ್ನೋ: 2018ರಲ್ಲಿ ಕಾಸ್ ಗಂಜ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯವು 28 ಆರೋಪಿಗಳನ್ನು ದೋಷಿ ಗುರುತಿಸಿ, ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಅಲ್ಲದೇ ವಿಶೇಷ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವಿವೇಕಾನಂದ ಶರಣ್ ತ್ರಿಪಾಠಿ ಅವರು, ಪ್ರತಿ ಅಪರಾಧಿಗೂ ತಲಾ 80,000 ರೂ. ದಂಡ ವಿಧಿಸಿದೆ. ಇದನ್ನೂ ಓದಿ: ಕಲಬುರಗಿ | ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬೈರತಿ ಸುರೇಶ್‌ಗೆ ಮನವಿ
Advertisement
Advertisement
ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯವು 2018ರ ತಿರಂಗಾ ಯಾತ್ರೆಯ ವೇಳೆ ಕಾಸ್‌ಗಂಜ್‌ನಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟ ಚಂದನ್ ಗುಪ್ತಾ ಅವರ ಹತ್ಯೆಗೆ ಸಂಬಂಧಿಸಿದಂತೆ ಜನವರಿ 2 ರಂದು, 28 ಆರೋಪಿಗಳನ್ನು ದೋಷಿ ಎಂದು ಗುರುತಿಸಿದ್ದು, ಇಂದು ಶಿಕ್ಷೆ ಪ್ರಕಟಿಸಿದೆ. ಆರೋಪಿಗಳಿಗೆ ಕೊಲೆ, ಕೊಲೆ ಯತ್ನ, ಗಲಭೆ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Advertisement
ಏನಿದು ಪ್ರಕರಣ?
2018ರ ಜನವರಿ 26 ರಂದು ಕಾಸ್ ಗಂಜ್‌ನಲ್ಲಿ ಹಿಂಸಾಚಾರ ನಡೆದಿತ್ತು. ಹಿಂದುತ್ವ ಸಂಘಟನೆಗೆ ಸೇರಿದ ಗುಂಪೊಂದು ಬೈಕ್ ನಲ್ಲಿ ತೆರಳಿ ಮುಸ್ಲಿಂ ಪ್ರಾಬಲ್ಯದ ಕಾಲೋನಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿತ್ತು. ವರದಿಗಳ ಪ್ರಕಾರ ಸ್ಥಳೀಯ ಆಡಳಿತದ ಅನುಮತಿಯಿಲ್ಲದೆ ಬೈಕ್ ರ‍್ಯಾಲಿ ನಡೆಸಿರುವ ಆರೋಪ ಕೇಳಿಬಂದಿತ್ತು. ಅಲ್ಲದೇ ಆ ಗುಂಪು ಕೇಸರಿ ಧ್ವಜ ಮತ್ತು ತ್ರಿವರ್ಣ ಧ್ವಜ ಹಿಡಿದುಕೊಂಡು ಕಾಲೋನಿಗೆ ಪ್ರವೇಶಿಸಿ ಅಲ್ಲಿನ ನಿವಾಸಿಗಳ ಜೊತೆ ವಾಗ್ವಾದ ನಡೆಸಿತ್ತು.
Advertisement
ಪೊಲೀಸರ ಪ್ರಕಾರ, ಎರಡೂ ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಚಂದನ್ ಗುಪ್ತಾ ಮೃತಪಟ್ಟಿದ್ದಾರೆ. ಕೋಮು ಘರ್ಷಣೆಯ ಕುರಿತು ಆರಂಭದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು. ಆದರೆ, ಈ ಪ್ರಕರಣದಲ್ಲಿ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿದ ಬಳಿಕ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ – 2 ದಶಕಗಳಿಂದ ಬಗೆಹರಿಯದ ಸಮಸ್ಯೆ!