ಬಾಗಲಕೋಟೆ: ಒಂದು ಕಡೆ ಕಬ್ಬು ಬೆಳೆಗಾರರ ಹೋರಾಟ ಮುಗಿಲು ಮುಟ್ಟಿದೆ. ಈ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಬ್ಬು ಬೆಳೆಗಾರನೋರ್ವರಿಗೆ ಬ್ಯಾಂಕ್ ನಿಂದ ಕೋರ್ಟ್ ಸಮನ್ಸ್ ಬಂದಿದೆ.
ಸಾಲ ಮರುಪಾವತಿ ಮಾಡುವಂತೆ ಸಮನ್ಸ್ ಜಾರಿಯಾಗಿದ್ದು, ರೈತ ಕಂಗಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ರೈತ ರವಿಶಂಕರ ವೆಂಕಪ್ಪ ಕುಸಗಲ್ ಗೆ ಬೆಂಗಳೂರಿನ ಡೆಬ್ಟ್ ರಿಕವರಿ ಟ್ರಿಬ್ಯೂನಲ್‍ನಿಂದ ಸಮನ್ಸ್ ಜಾರಿಯಾಗಿದೆ.
Advertisement
ರೈತ ಇಂಡಿಯನ್ ಬ್ಯಾಂಕ್ ನಿಂದ 2015ರಲ್ಲಿ ಕಬ್ಬು ಬೆಳೆಸಾಲ ಅಂತ 10 ಲಕ್ಷ ರೂ. ಪೈಪ್ ಲೈನ್ ಗಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು. ನಂತರ ಕೊಳವೆ ಬಾವಿ ಬಂದ್ ಆಗಿದ್ದರಿಂದ ನಾಲ್ಕು ವರ್ಷಗಳಿಂದ ಕಬ್ಬು ಬೆಳೆಯಲು ಆಗಿರಲಿಲ್ಲ. ಹೀಗಾಗಿ ರೈತನಿಗೆ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಲಾಗಿಲ್ಲ. ಆದರೂ ನೋಟಿಸ್ ಬರುತ್ತಲೇ ಇತ್ತು. ಇದರಿಂದ ನೊಂದ ರೈತ ಶಿವಶಂಕರ್ ಬ್ಯಾಂಕಿನ ಕಿರುಕುಳಕ್ಕೆ ಬೇಸತ್ತು ಕಳೆದ ಆಗಸ್ಟ್ 30ರಂದು ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದರು. ನಂತರ ಮುಖ್ಯಮಂತ್ರಿ ಸಚಿವಾಲಯದಿಂದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬಾಗಲಕೋಟೆ ಜಿಲ್ಲಾಧಿಕಾರಿಗೆ ಕಳೆದ ಅಕ್ಟೋಬರ್ 3 ರಂದು ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು.
Advertisement
Advertisement
ನಾಲ್ಕು ವರ್ಷಗಳ ಹಿಂದೆ ಮುಧೋಳ ರನ್ನ ಸಕ್ಕರೆ ಕಾರ್ಖಾನೆಗೆ ಸಾಗಿಸಿದ ಕಬ್ಬಿಗೆ ಕಡಿತ ಮಾಡಿದ್ದ ದುಡ್ಡು ಇನ್ನೂ ಬಾಕಿ ಬಂದಿಲ್ಲ ಸಾಲ ಎಲ್ಲಿ ಕಟ್ಟಲಿ ಎಂಬುದು ಇದೀಗ ರೈತನ ಗೋಳಾಗಿದೆ. ಶಿವಶಂಕರನಿಗೆ ಅಷ್ಟೇ ಅಲ್ಲದೆ ಇವರಿಗೆ ಜಾಮೀನುದಾರರಾದವ್ರಿಗೂ ಸಮನ್ಸ್ ಜಾರಿಯಾಗಿದೆ. ರೈತನಿಗೆ ಸರ್ಕಾರದ ಸಾಲ ಮನ್ನಾ ಲಾಭವೂ ಕೂಡ ತಟ್ಟಿಲ್ಲ ಬ್ಯಾಂಕಿನಿಂದ ಕಿರುಕುಳವೂ ನಿಂತಿಲ್ಲ.
Advertisement
ಸಿಎಂ ಬ್ಯಾಂಕಿನವರಿಗೆ ನೋಟಿಸ್ ನೀಡದಂತೆ ಹೇಳಿದ್ದೇನೆ ಅಂತಾರೆ. ಆದರೆ ಇಲ್ಲಿ ಬ್ಯಾಂಕಿನವರು ಅದಕ್ಕೆ ಕಿವಿಗೊಡದೇ ನೋಟಿಸ್ ಮೇಲೆ ನೋಟಿಸ್ ಕೊಡುತ್ತಲೇ ಇದ್ದಾರೆ. ಇದು ಕಬ್ಬು ಬೆಳೆಗಾರ ರೈತ ರವಿಶಂಕನಿಗೆ ಚಿಂತೆಗೀಡು ಮಾಡಿದೆ.
ಕಬ್ಬು ಬೆಳೆಗಾರರ ಹೋರಾಟದ ನಡುವೆಯೇ ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಕಬ್ಬು ರೈತರು ಮತ್ತು ಕಾರ್ಖಾನೆ ಮಾಲೀಕರ ಮಹತ್ವದ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಗಂಟೆಗೆ ಸಭೆ ನಡೆಯಲಿದ್ದು, ಕಬ್ಬು ಬಾಕಿ ಪಾವತಿ ಮತ್ತು ರೈತರ ಇತರೆ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews