ಹುಬ್ಬಳ್ಳಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿರುದ್ಧ ನ್ಯಾಯಾಲಯ ಗುಡುಗಿದ್ದು, ಸಾರಿಗೆ ಬಸ್‍ನ್ನು ಹುಬ್ಬಳ್ಳಿಯ ಕೋರ್ಟ್ ಜಪ್ತಿ ಮಾಡಿದೆ.
2019ರಲ್ಲಿ ಹುಬ್ಬಳ್ಳಿಯ ನವಲಗುಂದಲ್ಲಿ ಸಂಭವಿಸಿದ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬವರು ಮೃತಪಟ್ಟಿದ್ದರು. ಬಳಿಕ ಅವರ ಕುಟುಂಬಕ್ಕೆ ಸಾರಿಗೆ ಇಲಾಖೆ ನೀಡುವುದಾಗಿ ತಿಳಿಸಿದ್ದ ಪರಿಹಾರ ನೀಡಿರಲಿಲ್ಲ. ಹಾಗಾಗಿ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ 28 ಲಕ್ಷ ಪರಿಹಾರ ಜೊತೆಗೆ ಅದಕ್ಕೆ ಶೇ.6 ಬಡ್ಡಿ ಹಾಕಿ ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡುವಂತೆ ಸೂಚಿಸಿತ್ತು. ಆದ್ರೆ ಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದ ಸಾರಿಗೆ ಸಂಸ್ಥೆ ನಿರ್ಲಕ್ಷ್ಯ ಧೋರಣೆಯನ್ನು ತಾಳಿತ್ತು. ಹೀಗಾಗಿ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು. ಇದಕ್ಕೂ ಸಹ ಸಾರಿಗೆ ಸಂಸ್ಥೆ ತಲೆಕೆಡಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಮುಂದಿನ 5 ದಿನವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಸಂಸ್ಥೆ ವಿರುದ್ಧ ಅಸಮಾಧಾನಗೊಂಡ ನ್ಯಾಯಾಲಯ ಜಪ್ತಿ ವಾರಂಟ್ ಅನ್ವಯ ಇಂದು ಕೆ.ಎ 17 ಎಫ್ 1945 ನೋಂದಾಯಿತ ಸಂಖ್ಯೆಯ ಬಸ್‍ನ್ನು ಜಪ್ತಿಗೆ ಆದೇಶ ನೀಡಿತು. ಇದರ ಅನ್ವಯ ಕೋರ್ಟ್ ಸಿಬ್ಬಂದಿ ಐರಾವತ ಬಸ್ ಜಪ್ತಿ ಮಾಡಿ ಬಸ್‍ನ್ನು ಹುಬ್ಬಳ್ಳಿ ಕೋರ್ಟ್ ಎದುರು ತಂದು ನಿಲ್ಲಿಸಿದ್ದಾರೆ. ಇದನ್ನೂ ಓದಿ: ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ