– 50:50 ಸೈಟು ಪಡೆದ ಫಲಾನುಭವಿಗಳಿಗೆ ಮತ್ತೆ ಸಂಕಷ್ಟ
– 631 ಸೈಟುಗಳು ಜಪ್ತಿಯಾಗುತ್ತಾ?
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸನ್ನು ಸಿಬಿಐಗೆ ವರ್ಗಾಯಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಮುಗಿಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೇ, ಈ ಆದೇಶ ಹೊರಬೀಳುವವರೆಗೂ, ಲೋಕಾಯುಕ್ತ ತನಿಖೆಯ ವರದಿಯನ್ನು ಕೆಳಹಂತದ ಕೋರ್ಟ್‌ಗೆ ಸಲ್ಲಿಕೆ ಮಾಡದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸೋಮವಾರ ಸಿಎಂ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ರವಿ ವರ್ಮಾಕುಮಾರ್ ವಾದ ಮಂಡಿಸಿದ್ರು. ದೇವರಾಜ್ ಪರ ದುಶ್ಯಂತ್ ದವೆ, ದೂರುದಾರನ ಪರವಾಗಿ ಮಣಿಂದರ್ ಸಿಂಗ್, ಸರ್ಕಾರದ ಪರ ಕಪಿಲ್ ಸಿಬಲ್, ಸಿಬಿಐ ಪರವಾಗಿ ಪ್ರಸನ್ನಕುಮಾರ್ ವಕಾಲತ್ತು ವಹಿಸಿದ್ರು.
Advertisement
ಸಿದ್ದರಾಮಯ್ಯಗೆ `ಹೈ’ ಟೆನ್ಶನ್ – ವಾದ-ಪ್ರತಿವಾದ ಹೇಗಿತ್ತು?
Advertisement
* ಮಣೀಂದರ್ ಸಿಂಗ್ – ಮುಡಾದ 141 ಫೈಲ್ ಕಳುವಾಗಿವೆ.
* ಮಣೀಂದರ್ ಸಿಂಗ್ – ಲೋಕಾಯುಕ್ತದಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ
* ಮಣೀಂದರ್ ಸಿಂಗ್ – ಸಿಎಂ ಇಸಿಗೆ ಸಲ್ಲಿಸಿರೋ ಅಫಿಡವಿಟ್‌ನಲ್ಲಿ 14 ಸೈಟ್ ಬಗ್ಗೆ ಉಲ್ಲೇಖಿಸಿಲ್ಲ
* ಮಣೀಂದರ್ ಸಿಂಗ್- ಲೋಕಾಯುಕ್ತ ತನಿಖೆ ವೇಳೆ ಸಿಎಂ ಪತ್ನಿ ಸೈಟ್ ಏಕೆ ಹಿಂತಿರುಗಿಸಿದ್ರು?
* ಮಣೀಂದರ್ ಸಿಂಗ್ – ಆರೋಪಿಗೆ ತನಿಖಾ ಸಂಸ್ಥೆ ನಿರ್ಧಾರ ಮಾಡೋ ಅಧಿಕಾರ ಇಲ್ಲ
* ಮಣೀಂದರ್ ಸಿಂಗ್ – ಹೀಗಾಗಿ ಮುಡಾ ಕೇಸನ್ನು ಸಿಬಿಐಗೆ ವಹಿಸುವ ಅಗತ್ಯವಿದೆ
* ಕಪಿಲ್ ಸಿಬಲ್ – ಸಿಎಂ ಮೇಲೆ ಆರೋಪ ಇದ್ದ ಮಾತ್ರಗೆ ಸಿಬಿಐಗೆ ಕೊಡಲಾಗದು
* ಕಪಿಲ್ ಸಿಬಲ್ – ಪ್ರಕರಣವನ್ನು ಸಿಬಿಐಗೆ ವಹಿಸುವುದು ಶಾಸನಕ್ಕೆ ವಿರುದ್ಧವಾದ ನಡೆ
* ಕಪಿಲ್ ಸಿಬಲ್ – ಸಿಎಂ ವಿರುದ್ಧ ತನಿಖೆ ನಡೆಸುವ ಹಕ್ಕು ಲೋಕಾಯುಕ್ತರಿಗೆ ಇದೆ
* ಕಪಿಲ್ ಸಿಬಲ್ – ಹೀಗಾಗಿ ಕೇಸನ್ನು ಸಿಬಿಐಗೆ ವಹಿಸುವುದು ಉಚಿತವಲ್ಲ
* ಕಪಿಲ್ ಸಿಬಲ್ – ಸಿಬಿಐ ಅನ್ನು ಪಂಜರದ ಗಿಳಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ
* ಕಪಿಲ್ ಸಿಬಲ್ – ಹಾಗಿದ್ದಾಗ ಸಿಬಿಐನಿಂದ ಪಾರದರ್ಶಕ ತನಿಖೆ ಹೇಗೆ ಸಾಧ್ಯ?
Advertisement
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ, ಮುಡಾದ 50:50 ಅನುಪಾತದಲ್ಲಿ ಸೈಟ್ ಪಡೆದ ಫಲಾನುಭವಿಗಳಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಜಪ್ತಿ ಮಾಡಿರುವ 142 ಆಸ್ತಿಗಳ ಪಟ್ಟಿಯನ್ನು ಉಪ ನೋಂದಣಾಧಿಕಾರಿಗಳ ಕಚೇರಿಗೆ ಇಡಿ ಕಳಿಸಿಕೊಟ್ಟಿದೆ. ಮೈಸೂರಿನ ನಾಲ್ಕು ಉಪನೋಂದಣಾಧಿಕಾರಿಗಳಿಗೆ ಪಟ್ಟಿ ರವಾನಿಸಿರುವ ಇಡಿ, ಮುಂದಿನ ಆದೇಶದವರೆಗೂ ಈ ಆಸ್ತಿಗಳನ್ನ ಬೇರೆಯವರಿಗೆ ನೋಂದಣಿ ಮಾಡಿಕೊಡಬಾರದು ಎಂದು ನಿರ್ದೇಶನ ನೀಡಿದೆ.
Advertisement
ಇನ್ನೂ 50:50 ಅನುಪಾತದ ಅನುಸಾರ ಕೆಲವರು ಪಡೆದಿದ್ದ 631 ಸೈಟ್‌ಗಳ ದಾಖಲೆಗಳನ್ನು ಇಡಿ ಕೇಳಿತ್ತು. ಈ ಎಲ್ಲಾ ದಾಖಲೆಗಳನ್ನು ಆಯುಕ್ತರು ಇಡಿಗೆ ಕಳುಹಿಸಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಬಹುತೇಕ ಇದೇ ವಾರದಲ್ಲಿ 631 ಸೈಟ್‌ಗಳನ್ನು ಇಡಿ ಜಪ್ತಿ ಮಾಡುವ ಸಾಧ್ಯತೆ ಇದೆ. ಇದರ ನಡ್ವೆ, ಇಡಿ 3ನೇ ಹಂತದ ಸೈಟ್ ಸೀಜ್ ಪ್ರಕ್ರಿಯೆಯನ್ನು ಆರಂಭಿಸಿದೆ. ಮತ್ತೆ 550 ಸೈಟ್‌ಗಳ ಮಾಹಿತಿಯನ್ನು ಮುಡಾ ಬಳಿ ಕೇಳಿದೆ. ಇಡಿ ಕ್ರಮವನ್ನು ಬಿಜೆಪಿಯ ಸಿಟಿ ರವಿ ಸ್ವಾಗತಿಸಿದ್ದಾರೆ.