ಲಕ್ನೋ: ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಸರ್ವೆ (Survey) ನಡೆಸಲು ವಾರಣಾಸಿ ನ್ಯಾಯಾಲಯ (Varanasi Court) ಶುಕ್ರವಾರ ಅನುಮತಿ ನೀಡಿದೆ.
ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ವಿವಾದಿತ ಶಿವಲಿಂಗದ (Shivling) ರಚನೆಯನ್ನು ಹೊರತುಪಡಿಸಿ ಸಂಕೀರ್ಣದಲ್ಲಿ ಕಾರ್ಬನ್ ಡೇಟಿಂಗ್ ನಡೆಸಲು ಅನುಮತಿ ನೀಡಲಾಗಿದೆ. ವೈಜ್ಞಾನಿಕ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸಲಿದೆ. ವಿಚಾರಣೆಗೆ ಮುಂದಿನ ದಿನಾಂಕವಾಗಿರುವ ಆಗಸ್ಟ್ 4 ರೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ನ್ಯಾಯಾಲಯ ಎಎಸ್‌ಐಗೆ ತಿಳಿಸಿದೆ.
Advertisement
Advertisement
ಹಿಂದೂಗಳ ದೇವಾಲಯ ಇರುವ ಜಾಗದಲ್ಲಿ ಮಸೀದಿ ಕಟ್ಟಲಾಗಿದ್ದು, ಈ ಕುರಿತು ವೈಜ್ಞಾನಿಕ ಸರ್ವೇ ಆಗಬೇಕು ಎಂದು ಹಿಂದೂಗಳ ಪರವಾಗಿ ಎಕೆ ವಿಶ್ವೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಇದಕ್ಕೂ ಮುನ್ನ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ವಾದ-ಪ್ರತಿವಾದಗಳನ್ನು ನ್ಯಾಯಾಲಯ ಆಲಿಸಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಜ್ಞಾನವಾಪಿ ಮಸೀದಿಯ ಸಂಪೂರ್ಣ ಸರ್ವೇ ನಡೆಸಬೇಕು ಎಂದು ಹಿಂದೂ ಭಕ್ತರ ಪರ ವಕೀಲರು ಒತ್ತಾಯಿಸಿದ್ದರು. ಇದನ್ನೂ ಓದಿ: ನಾಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
Advertisement
ಸದ್ಯ ಮಸೀದಿಯ ಕಾರ್ಬನ್ ಡೇಟಿಂಗ್‌ಗೆ ವಾರಣಾಸಿ ನ್ಯಾಯಲಯ ಆದೇಶಿಸಿದೆ. ಇದಕ್ಕೂ ಮೊದಲು ವಜೂ ಸ್ಥಳದಲ್ಲಿದ್ದ ಶಿವಲಿಂಗ ಆಕೃತಿಯು ಶಿವಲಿಂಗ ಅಥವಾ ಕಾರಂಜಿಯೇ ಎಂದು ತಿಳಿಯಲು ಕಾರ್ಬನ್ ಡೇಟಿಂಗ್ ಮಾಡಲು ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಆದರೆ ವಿವಾದಿತ ಶಿವಲಿಂಗ ರಚನೆಯ ಕಾರ್ಬನ್ ಡೇಟಿಂಗ್ ನಡೆಸದಂತೆ ಎಎಸ್‌ಐಗೆ ಕಳೆದ ಮೇನಲ್ಲಿ ಸೂಚಿಸಿತ್ತು.
Advertisement
ವಾರಣಾಸಿ ಕೋರ್ಟ್‌ನಲ್ಲಿ ಹಿಂದೂ ಅರ್ಜಿದಾರರಿಗೆ ಗೆಲುವು ಸಿಕ್ಕಿದೆ. ಆದರೆ ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ಕೋರ್ಟ್ ಇಲ್ಲಿ ಅನುಮತಿ ನೀಡಲಿದ್ಯಾ ಕಾದು ನೋಡಬೇಕು. ಇದನ್ನೂ ಓದಿ: ಶಸ್ತ್ರಾಸ್ತ್ರ ಹಿಡಿದುಕೊಂಡು ಮಮತಾ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಅರೆಸ್ಟ್
Web Stories