ಹಾವೇರಿ: ಭೂಸ್ವಾಧೀನದ ಪರಿಹಾರ ಹಣ ನೀಡಲು ಜಿಲ್ಲಾಡಳಿತ ವಿಫಲವಾದ ಹಿನ್ನೆಲೆಯಲ್ಲಿ ಹಾವೇರಿ (Haveri) ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮ ಅವರ ಕಾರು ಜಪ್ತಿ ಮಾಡುವಂತೆ ಜಿಲ್ಲಾ ನ್ಯಾಯಾಲಯವು ಆದೇಶ ನೀಡಿದೆ.
ಕೆರೆ ನಿರ್ಮಾಣದ ಉದ್ದೇಶದಿಂದ ತಾಲೂಕಿನ ಕೆರೂಡಿ ಗ್ರಾಮದ ರುದ್ರಪ್ಪ ಬಸಪ್ಪ ಗುತ್ತಲ ಎಂಬುವರಿಗೆ ಸೇರಿದ ಮಾಸಣಗಿ ಗ್ರಾಮದಲ್ಲಿದ್ದ 2 ಎಕ್ರೆ 29 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿದ್ದ ಜಿಲ್ಲಾಧಿಕಾರಿಗಳು ಕೆರೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ್ದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು
1970ರಿಂದ ಬಡ್ಡಿ ಭೂಸ್ವಾಧೀನಕ್ಕೆ ಸಂಬಂಧಿಸಿಂತೆ ಪ್ರತಿ ಎಕರೆಗೆ 1.30 ಲಕ್ಷ ರೂ. ಪರಿಹಾರ ನೀಡಬೇಕಾಗಿದ್ದ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ಥೆ ಶಿವಕ್ಕ ಗುತ್ತಲ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದನ್ನೂ ಓದಿ: ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಶುರು- ದರ್ಶನ್ ಭಾಗಿ
ಪರ-ವಿರೋಧ ವಿಚಾರಣೆ ನಡೆಸಿದ ನ್ಯಾಯಾಲಯವು ಸಂತ್ರಸ್ಥೆಗೆ ಪರಿಹಾರ ಮೊತ್ತ ನೀಡುವವರೆಗೂ ಬಡ್ಡಿಸಹಿತ ಸಂದಾಯ ಮಾಡುವಂತೆ ಆದೇಶ ಮಾಡಿತ್ತು. 55 ವರ್ಷ ಕಳೆದರೂ ಸರ್ಕಾರ ಮಾತ್ರ ಪರಿಹಾರ ನೀಡಿರಲಿಲ್ಲ. ಜಿಲ್ಲಾಡಳಿತವು ಅಲ್ಲಿಂದ ಇಲ್ಲಿಯವರೆಗೂ ಬಡ್ಡಿಸಹಿತ ಬರಬೇಕಾಗಿದ್ದ ಒಟ್ಟು 45.80 ಲಕ್ಷ ರೂ. ಪರಿಹಾರ ಮೊತ್ತವನ್ನು ಸಂತ್ರಸ್ಥೆಗೆ ನೀಡಿರಲಿಲ್ಲ. ಇದನ್ನೂ ಓದಿ: ಕೊಡಗಿನ ಹಲವೆಡೆ ಭೂಕಂಪನ – ಬೆಚ್ಚಿದ ಜನ