– 150 ಕೋಟಿ ರೂ. ಬಾಕಿ ಉಳಿಸಿಕೊಂಡಿರೋ ಸರ್ಕಾರ
ಶಿಮ್ಲಾ: ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಹಿಮಾಚಲ ಪ್ರದೇಶ ಸರ್ಕಾರಕ್ಕೆ (Himachal Pradesh Hovernment) ಕೋರ್ಟ್ ಮತ್ತೊಂದು ಶಾಕ್ ಕೊಟ್ಟಿದೆ. ಸೆಲಿ ಹೈಡ್ರೋ ವಿದ್ಯುತ್ ಕಂಪನಿಗೆ 64 ಕೋಟಿ ರೂ. ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ದೆಹಲಿಯ ಹಿಮಾಚಲ ಭವನವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್ (Himachal Pradesh High Court) ಸೋಮವಾರ ಆದೇಶ ನೀಡಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಕಾಯ್ದಿರಿಸಿದೆ.
Advertisement
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಂಪನಿಗೆ ಶೇ.7ರಷ್ಟು ಬಡ್ಡಿಯೊಂದಿಗೆ ಮುಂಗಡ ಪ್ರೀಮಿಯಂ ಪಾವತಿಸುವಂತೆ ಆದೇಶಿಸಿದೆ. ಜೊತೆಗೆ ಬಿಲ್ ಪಾವತಿಯಾಗದಿರಲು ಕಾರಣವಾದ ಅಧಿಕಾರಿಗಳನ್ನು ಪತ್ತೆ ಹಚ್ಚಿ 15 ದಿನಗಳಲ್ಲಿ ವರದಿ ಕೊಡಲು ಹಿಮಾಚಲ ಪ್ರದೇಶ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದೆ. ಇದನ್ನೂ ಓದಿ: 100 ಕೋಟಿ ಸ್ಕ್ಯಾಮ್: ದೆಹಲಿಯಲ್ಲಿ ಚೀನಾ ಪ್ರಜೆ ಅರೆಸ್ಟ್
Advertisement
ಪ್ರಕರಣ ಸಂಬಂಧ ಸತ್ಯಶೋಧನೆ ತನಿಖೆ ನಡೆಸುವಂತೆ ನ್ಯಾಯಾಲಯವು ವಿದ್ಯುತ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದೆ. ಇದರಿಂದ ತೀವ್ರ ಮುಖಭಂಗ ಅನುಭವಿಸಿರುವ ಸರ್ಕಾರ, ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?
Advertisement
Advertisement
ಏನಿದು ಪ್ರಕರಣ?
2009 ರಲ್ಲಿ, ಹಿಮಾಚಲ ಪ್ರದೇಶದ ಅಂದಿನ ಸರ್ಕಾರವು ಲಾಹೌಲ್-ಸ್ಪಿತಿ ಜಿಲ್ಲೆಗೆ ಸಂಬಂಧಿಸಿದಂತೆ ಸೆಲಿ ಹೈಡ್ರೋ (Seli Hydro) ಕಂಪನಿಗೆ 400 MW ವಿದ್ಯುತ್ ಯೋಜನೆಯನ್ನು ಮಂಜೂರು ಮಾಡಿತ್ತು. ಯೋಜನೆಗೆ ಅಗತ್ಯವಿರುವ ರಸ್ತೆ ನಿರ್ಮಾಣಕ್ಕೆ ಸಹಾಯ ಮಾಡಲು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅನ್ನು ಸಹ ನಿಯೋಜಿಸಲಾಗಿತ್ತು. ಒಪ್ಪಂದದ ಪ್ರಕಾರ, ರಾಜ್ಯ ಸರ್ಕಾರವು ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಹೈಡ್ರೋ ಕಂಪನಿಗೆ ಮೂಲಸೌಕರ್ಯ ಒದಗಿಸಬೇಕಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದರಿಂದ ಕಂಪನಿಯು 2017 ರಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ನಂತರ ಸೌಲಭ್ಯಗಳ ಕೊರತೆಯಿಂದಾಗಿ, ಕಂಪನಿಯು ಯೋಜನೆಯನ್ನು ಸ್ಥಗಿತಗೊಳಿಸಿತು. ಇದರಿಂದ ಕಂಪನಿ ಪಂಚಾಯಿತಿಯಲ್ಲಿ ಠೇವಣಿ ಇರಿಸಿದ್ದ 64 ಕೋಟಿ ರೂ. ಮುಂಗಡ ಹಣವನ್ನು 7% ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು. ಆದ್ರೆ ಅಂದಿನ ಸರ್ಕಾರ ಕೋರ್ಟ್ ಆದೇಶವನ್ನು ಧಿಕ್ಕರಿಸಿದ ಕಾರಣ ಬಡ್ಡಿ ಸೇರಿ ಈಗ ಬಾಕಿ ಮೊತ್ತ 150 ಕೋಟಿ ರೂ. ತಲುಪಿದೆ. ಇದೀಗ ಸರ್ಕಾರವು ಈ ಮೊತ್ತವನ್ನು ಬರಿಸಬೇಕು ಎಂದು ಕೋರ್ಟ್ ಹೇಳಿದೆ.
ಈ ಹಣ ಸರ್ಕಾರಿ ಖಜಾನೆಯಿಂದ ಹೋದರೆ ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿದೆ. ಹಾಗಾಗಿ ದೆಹಲಿಯಲ್ಲಿರುವ ಹಿಮಾಚಲ ಭವನವನ್ನು ಹರಾಜು ಹಾಕುವ ಮೂಲಕ ಕಂಪನಿಗೆ ಹಣ ಪಡೆಯಲು ಅವಕಾಶ ನೀಡಲಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಗುಜರಾತ್ | ನಕಲಿ ವೈದ್ಯರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ – ಆಹ್ವಾನ ಪತ್ರಿಕೆಯಲ್ಲಿ ಪೊಲೀಸ್ ಕಮಿಷನರ್ ಹೆಸರು!
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu), ಕೋರ್ಟ್ ಆದೇಶವನ್ನು ನಾನು ಓದಿಲ್ಲ. ಅಂದು ಕಂಪನಿಗಳು ಬಿಡ್ ಮಾಡಿದ ಪ್ರತಿ ಮೆಗಾವ್ಯಾಟ್‌ಗೆ ಮೀಸಲು ಬೆಲೆ ನಿಗದಿಯಾಗಿತ್ತು. ಮುಂಗಡ ಪ್ರೀಮಿಯಂ ವಿಚಾರದಲ್ಲಿ ಮಧ್ಯಸ್ಥಿಕೆಯಿಂದ ನಿರ್ಧಾರವಾಗಿತ್ತು. ಮಧ್ಯಸ್ಥಿಕೆ ಆದೇಶದ ವಿರುದ್ಧ ನಮ್ಮ ಸರ್ಕಾರ ಹೈಕೋರ್ಟ್‌ಗೆ ಹೋಗಿತ್ತು. ಸರ್ಕಾರ 64 ಕೋಟಿ ರೂ.ಗಳನ್ನ ಪಂಚಾಯಿತಿಗೆ ಜಮೆ ಮಾಡಬೇಕಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್ | ಕರಾವಳಿ ಕಾವಲು ಪಡೆಯಿಂದ ಪಾಕ್ ವಶದಲ್ಲಿದ್ದ 7 ಭಾರತೀಯ ಮೀನುಗಾರರ ರಕ್ಷಣೆ