ಹಾರೆಯಿಂದ ಹೊಡೆದು ಪತ್ನಿಯ ಕೊಲೆ – ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Public TV
1 Min Read
GLB COURT

ಕಲಬುರಗಿ: ನಗರದ ಹೀರಾಪುರ ಬಡಾವಣೆಯ ಮನೆಯಲ್ಲಿ ತನ್ನ ಪತ್ನಿಯನ್ನು ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ನಗರದ 3ನೇಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

KALABURAGI COURT

ಶಿಕ್ಷೆಗೆ ಗುರಿಯಾಗಿರುವ ಪತಿಯನ್ನು ಅಫಜಲಪುರ ತಾಲೂಕಿನ ರೇವೂರ್ ಸಂತೋಷ ಅಣ್ಣಾರಾಯ ಪಾಟೀಲ್ ಎಂದು ಗುರುತಿಸಲಾಗಿದೆ. ಆರೋಪಿ ಹೀರಾಪುರ ಬಾಡಿಗೆ ಮನೆಯಲ್ಲಿ ಪತ್ನಿ ಸವಿತಾಳಿಗೆ ಹಾರೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯ ಪಿಐ ವಾಜೀದ್ ಪಟೇಲ್ ತನಿಖೆ ಮಾಡಿ ದೋಷಾರೋಪಣೆ ವರದಿ ಸಲ್ಲಿಸಿದ್ದರು. ಇದನ್ನೂ ಓದಿ: ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ – ಮಗನಿಂದಲೇ ತಾಯಿಯ ಮೇಲೆ ರೇಪ್‌

ಈ ಕುರಿತು ವಿಚಾರಣೆ ಮಾಡಿದ 3ನೇಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಗದೀಶ್ ವಿ.ಎನ್ ಅವರು, ಕಲಂ 302, 504ರ ಅಡಿಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ, ಮೃತಳ ಮಕ್ಕಳು ಪರಿಹಾರಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಗುರುಲಿಂಗಪ್ಪ ಶ್ರೀಮಂತ ತೇಲಿ, ವಾದ ಮಂಡಿಸಿದ್ದರು.  ಇದನ್ನೂ ಓದಿ: ಒಳ ಉಡುಪು, ಗುಪ್ತಾಂಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ಮೂವರು ಮಹಿಳೆಯರು ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *