ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ (Land Grab) ಮಾಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಾಜಿ ಡಾನ್ ಜೇಡ್ರಳ್ಳಿ ಕೃಷ್ಣಪ್ಪ (Jedralli Krishnappa) ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಹೌದು. 16 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಡಾನ್ ಜೇಡ್ರಳ್ಳಿ ಕೃಷ್ಣಪ್ಪರನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಎಸಿಜಿಎಂ ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದ್ದರು. ಇದನ್ನೂ ಓದಿ: UCC ಬಿಲ್ ಪಾಸ್ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ
Advertisement
Advertisement
ಕೃಷ್ಣಪ್ಪ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ಹಾಜರಾಗಿ ಬ್ಯಾಡರಹಳ್ಳಿ ಪೊಲೀಸರ (Byadarahalli Police) ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿವಿಲ್ ಕೇಸ್‌ನಲ್ಲಿ ಪೊಲೀಸರಿಗೇನು ಕೆಲಸ? ನಮ್ಮ ಕಕ್ಷಿದಾರ ರಿಜಿಸ್ಟರ್ಡ್ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ನರಸಿಂಹಯ್ಯ ಹಾಗೂ ಆತನ ಹೆಣ್ಣು ಮಕ್ಕಳು ರಿಜಿಸ್ಟರ್ ಆಫೀಸ್‌ಗೆ ಬಂದು ಸಹಿ ಮಾಡಿದ್ದಾರೆ. ಜಮೀನು ತಮ್ಮದಲ್ಲ ಅಂದ್ರೆ ಯಾರಾದ್ರೂ ಬರೋದಕ್ಕೆ ಸಾಧ್ಯನಾ? ಎಫ್‌ಐಆರ್‌ನಲ್ಲಿರುವ ಸೆಕ್ಷನ್‌ಗಳನ್ನ ದುರುದ್ದೇಶಪೂರ್ವಕವಾಗಿ ಹಾಕಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: ಕರ್ನಾಟಕದ GSTಯ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ – ನಿರ್ಮಲಾ ಸೀತಾರಾಮನ್
Advertisement
ಅಲ್ಲದೇ 7 ವರ್ಷಗಳ ಶಿಕ್ಷೆ ಒಳಗಿನ ಕೇಸ್‌ಗಳಲ್ಲಿ ಅರೆಸ್ಟ್ ಮಾಡಬಾರದು ಅಂತಿದೆ. ಆದರೂ ಅರೆಸ್ಟ್ ಮಾಡಿ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಬಿಟ್ರೆ ಇವರು ಬ್ಯಾಡರಹಳ್ಳಿ ಸ್ಟೇಷನ್ ಅನ್ನೇ ರಿಜಿಸ್ಟರ್ ಆಫೀಸ್ ಮಾಡ್ಕೊತಾರೆ. ಯಾರದ್ದು ಅಸಲಿ ನಕಲಿ ಅಂತ ತೀರ್ಮಾನ ಮಾಡಬೇಕಿರೋದು ತಹಶೀಲ್ದಾರ್. ಸಿವಿಲ್ ವ್ಯಾಜ್ಯದಲ್ಲಿ ಒಬ್ಬ ವ್ಯಕ್ತಿಯ ಪರವಾಗಿ ಪೊಲೀಸರು ಸಹಾಯ ಮಾಡಿದ್ದಾರೆ. ಅರೆಸ್ಟ್ ಮಾಡಿದ ಅಧಿಕಾರಿ ವಿರುದ್ಧ ನಿಂದನೆ ಹಾಕುವಂತೆ ಮನವಿ ಮಾಡಿದರು.
Advertisement
ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಒಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ