ರಾಮನಗರ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸ್ವ-ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟಿಸ್ ಬಂದಿದೆ. ಚನ್ನಪಟ್ಟಣ ತಾಲೂಕಿನ ಕುರಿದೊಡ್ಡಿ ಗ್ರಾಮದ ಒಂದೇ ಕುಟುಂಬದ ನಾಲ್ವರಿಗೆ ಬೆಳೆ ಸಾಲ ಕಟ್ಟದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ನೋಟಿಸ್ ಬಂದಿದೆ.
ಕುರಿದೊಡ್ಡಿಯ ತಾಯಿ ಶಾರದಮ್ಮ ಮಕ್ಕಳಾದ ಉಮಾಪತಿ, ಯೋಗಾನಂದ, ಜಯಂತಿ ಇವರಿಗೆ ಡಿಸೆಂಬರ್ 1 ರಂದು ಚನ್ನಪಟ್ಟಣದ ಜೆಎಂಎಫ್ ಸಿ ಕೋರ್ಟ್ ನಿಂದ ನೋಟಿಸ್ ಬಂದಿದೆ. ಶಾರದಮ್ಮ ಅವರು ಬೇವೂರು ಗ್ರಾಮದಲ್ಲಿನ ಕೆನರಾ ಬ್ಯಾಂಕ್ ಶಾಖೆಯಿಂದ ಸಾಲ ಪಡೆದಿದ್ದರು. 2 ಲಕ್ಷ ರೂಪಾಯಿಗಳನ್ನು 2010-11 ರಲ್ಲಿ ಕೃಷಿ ಸಾಲವಾಗಿ ಪಡೆದಿದ್ರು. ಆದ್ರೆ ಒಬ್ಬರು ಸಾಲ ಪಡೆದಿದ್ದಕ್ಕೆ ಇದೀಗ ಇಡೀ ಕುಟುಂಬಕ್ಕೆ ನೋಟಿಸ್ ನೀಡಿದ್ದು, ಕೋರ್ಟ್ ಗೆ ವಿಚಾರಣೆಗೆ ಹಾಜರಾಗಿ ಅಂತ ತಿಳಿಸಲಾಗಿದೆ.
ಪಹಣಿ ಕೂಡ ಅವರ ಹೆಸರಿನಲ್ಲೇ ಇದೆ. ಆದ್ರೆ ಸಾಲ ಪಡೆದ ಸಂದರ್ಭದಲ್ಲಿ ಶಾರದಮ್ಮ ಅವರು ಸಾಕ್ಷಿಗಳಾಗಿ ತಮ್ಮ ಮಕ್ಕಳ ಸಹಿಯನ್ನೇ ಪಡೆದಿದ್ದಾರೆ. ಹೀಗಾಗಿ ಕುಟುಂಬಸ್ಥರೆಲ್ಲರಿಗೂ ನೋಟಿಸ್ ನೀಡಲಾಗಿದೆ. ಕೋರ್ಟ್ ನೋಟೀಸ್ ನಿಂದ ಕುಟುಂಬ ಕಂಗಾಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv