ಕೋಲಾರ: ಮಾಲೂರು ಪುರಸಭೆ (Malur Municipality) ಸದಸ್ಯೆಯ ಆಯ್ಕೆಯನ್ನು ಅಸಿಂಧುಗೊಳಿಸಿ ಮಾಲೂರು ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.
ಕೋಲಾರ (Kolar) ಜಿಲ್ಲೆಯ ಮಾಲೂರು ಪುರಸಭೆ ಸದಸ್ಯೆ ಪಿ.ಸುಮಿತ್ರಾ ಆಯ್ಕೆ ಅಸಿಂಧುಗೊಳಿಸಿ ಮಾಲೂರು ಸಿವಿಲ್ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಮಂಡ್ಯದಲ್ಲಿ ಹೆಚ್‌ಡಿಕೆಗೆ ಬೃಹತ್ ಅಭಿನಂದನಾ ಸಮಾವೇಶ
2019ರ ಮೇ 29 ರಂದು ನಡೆದಿದ್ದ ಪುರಸಭೆ ಚುನಾವಣೆಯಲ್ಲಿ ಮಾಲೂರು ಪುರಸಭೆಯ 27 ನೇ ವಾರ್ಡ್‌ನಿಂದ ಬಿಜೆಪಿ ಬೆಂಬಲದಿಂದ ಸುಮಿತ್ರಾ ಆಯ್ಕೆಯಾಗಿದ್ದರು. 19ನೇ ವಯಸ್ಸಿನಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ನಾಮಪತ್ರದಲ್ಲಿ 19 ವರ್ಷ ಎಂದು ನಮೂದಿಸಿದ್ದರೂ ಚುನಾವಣಾ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸ್ಪರ್ಧೆಗೆ ಅವಕಾಶ ಸಿಕ್ಕಿತ್ತು.
ನಾಮಪತ್ರ ತಿರಸ್ಕಾರ ಮಾಡದೇ ಚುನಾವಣಾಧಿಕಾರಿಗಳು ಸ್ಪರ್ಧೆಗೆ ಅವಕಾಶ ನೀಡಿದ್ದರು. 19 ವರ್ಷಕ್ಕೆ ಸ್ಪರ್ಧೆ ಮಾಡಲು ಅವಕಾಶ ಇಲ್ಲ ಎಂದು ಪರಾಜಿತಾ ಅಭ್ಯರ್ಥಿ ಗಾಯತ್ರಿ ಕೋರ್ಟ್ ಮೆಟ್ಟಿಲೇರಿದ್ದರು. ಮತ ಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದಿದ್ದೇನೆ, ಸದಸ್ಯೆಯಾಗಿ ನಿರ್ದೇಶನ ನೀಡಬೇಕೆಂದು ಕೋರ್ಟ್‌ನಲ್ಲಿ ಗಾಯತ್ರಿ ಮನವಿ ಮಾಡಿದ್ದರು. ಇದನ್ನೂ ಓದಿ: 3ನೇ ಮದುವೆಗಾಗಿ ಪತ್ನಿಯ ಹತ್ಯೆ – ಶವ ವಿವಸ್ತ್ರಗೊಳಿಸಿ ಎಸೆದಿದ್ದ ಆರೋಪಿ ಅರೆಸ್ಟ್
ನ್ಯಾಯಾಲಯದಿಂದ ಸುಮಿತ್ರಾ ಆಯ್ಕೆ ಅಸಿಂಧು ಎಂದು ಮಾತ್ರ ತೀರ್ಪು ಬಂದಿದೆ. ಪುರಸಭೆ ಅವಧಿ ಇನ್ನು 8 ತಿಂಗಳು ಮಾತ್ರ ಬಾಕಿ ಇದ್ದು, ಉಪಚುನಾವಣೆ ನಡೆಯುವುದು ಅನುಮಾನ.